ನಕಲಿ ಸುದ್ದಿ ಹರಡಿದಕ್ಕಾಗಿ ಭಾರತ ಸರ್ಕಾರ 22 ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದೆ. ಹಾಗೆಯೇ 3 ಫೇಸ್ಬುಕ್ ಖಾತೆ ಮತ್ತು 1 ಟ್ವಿಟರ್ ಅಕೌಂಟ್ ಕೂಡ ಬ್ಲಾಕ್ ಮಾಡಿದೆ. ಭಾರತದ ವಿರುದ್ಧ ನಕಲಿ ಸುದ್ದಿ ಪ್ರಸಾರ ಮಾಡಿದ್ದ ಪಾಕಿಸ್ತಾನದ 4 ಯೂಟ್ಯೂಬ್ ಚಾನಲ್ ಕೂಡ ಬ್ಲಾಕ್ ಆಗಿದೆ.
ಈ ಹಿಂದೆಯೇ ಭಾರತದ 18 ಮತ್ತು ಪಾಕಿಸ್ತಾನದ 4 ಯೂಟ್ಯೂಬ್ ಚಾನೆಲ್ಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವೂ ನೋಟಿಸ್ ನೀಡಿತ್ತು. ಈ ನೋಟಿಸ್ಗೂ ಕ್ಯಾರೆ ಎನ್ನದೇ ಭಾರತದ ವಿರುದ್ಧ ನಕಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ 22 ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
2021 ಐಟಿ ರೂಲ್ಸ್ ಪ್ರಕಾರ ಯೂಟ್ಯೂಬ್ ಚಾನೆಲ್ಸ್ ಮತ್ತು ಸೋಷಿಯಲ್ ಮೀಡಿಯಾ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಯೂಟ್ಯೂಬ್ ಚಾನೆಲ್ಗಳು ಭಾರತ ವಿರೋಧಿ ಪ್ರಚಾರವನ್ನು ಉತ್ತೇಜಿಸಲು ಬಳಕೆಯಾಗುತ್ತಿದ್ದವು ಎಂದು ತಿಳಿದು ಬಂದಿದೆ.
ARP ನ್ಯೂಸ್, AOP ನ್ಯೂಸ್, LDC ನ್ಯೂಸ್, ಸರ್ಕಾರಿ ಬಾಬು ನ್ಯೂಸ್, SS ಜೋನ್ ಹಿಂದಿ, ಸ್ಮಾರ್ಟ್ ನ್ಯೂಸ್, ನ್ಯೂಸ್ 23 ಹಿಂದಿ, ಆನ್ಲೈನ್ ಖಬರ್, DP ನ್ಯೂಸ್, PKB ನ್ಯೂಸ್, ಬೋರಾನಾ ನ್ಯೂಸ್, ಸರ್ಕಾರಿ ನ್ಯೂಸ್ ಅಪ್ಡೇಟ್ ಸೇರಿದಂತೆ ಹಲವು ಯೂಟ್ಯೂಬ್ ಚಾನೆಲ್ಸ್ ನಿರ್ಬಂಧ ಹೇರಲಾಗಿದೆ.