ಉಪ್ಪಿನಂಗಡಿ: ಗುಂಡ್ಯ ಕಾಡಿನಲ್ಲಿ ಜೊತೆಗಿದ್ದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಬಂಧಿಸಿದ್ದು, ಈ ಹಿನ್ನೆಲೆ ಕೆಲ ಯುವಕರು ತಡರಾತ್ರಿ ಸಮಿತಿ ಸಭೆಗೆ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರು ರವರಿದ್ದ ಬಸ್ ಅನ್ನು ತಡೆದು ಗದ್ದಲ ಸೃಷ್ಟಿಸಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಮಾಜಿ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ ರವರು ಸ್ಪಷ್ಟೀಕರಣ ನೀಡಿದ್ದಾರೆ.
ಸಂಪ್ಯ ಮೂಲದ ಅನ್ಯಕೋಮಿನ ಯುವಕ ಹಿಂದೂ ಯುವತಿಯ ಜೊತೆ ಗುಂಡ್ಯ ಸಮೀಪದ ಕಾಡಿನಲ್ಲಿ ಸಿಕ್ಕಿ ಬಿದ್ದಿದ್ದು, ಇದೊಂದು ಲವ್ ಜಿಹಾದ್ ಪ್ರಕರಣವಾಗಿದೆ. ಸ್ಥಳೀಯರ ಕೆಲ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆದರೇ ಅನಾವಶ್ಯಕವಾಗಿ 15 ಜನ ಹಿಂದೂ ಯುವಕರ ಮೇಲೆ ಕೇಸು ದಾಖಲು ಮಾಡಲಾಗಿದೆ.
ಈ ಸಂದರ್ಭದಲ್ಲಿ ಶಾಸಕರಿಗೆ ಮತ್ತು ಹಿಂದೂ ಸಂಘಟನೆ ಪ್ರಮುಖರಿಗೆ ಮನವಿಯನ್ನು ನೀಡಿದ್ದೇವೆ. ಈ ಘಟನೆ ಅಂಗಾರ ರವರ ಕ್ಷೇತ್ರದಲ್ಲಿ ನಡೆದಿದ್ದು, ಅವರು ಸಂಪರ್ಕಕ್ಕೆ ಸಿಗದ ಹಿನ್ನೆಲೆ ತಕ್ಷಣ ನಾವೂ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರನ್ನು ಸಂಪರ್ಕ ಮಾಡಿದ್ದು, ತಕ್ಷಣ ಸ್ಪಂದಿಸಿದ ಶಾಸಕರು ಉನ್ನತ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ.
ಆದರೇ ಸಂಜೆ ವೇಳೆಗೆ ಈ ಪ್ರಕರಣದಲ್ಲಿ ಭಾಗಿಯಾಗದ ಇಬ್ಬರನ್ನು ಬಂಧಿಸಿದ್ದು, ಈ ವೇಳೆ ಮತ್ತೆ ನಾವೂ ಶಾಸಕರಿಗೆ ಕರೆ ಮಾಡಿ ಶಾಸಕರ ಬಳಿ ಭೇಟಿಯಾಗುವಂತೆ ಮನವಿ ಮಾಡಿದಾಗ ಬೆಂಗಳೂರಿಗೆ ತೆರಳುತ್ತಿದ್ದ ಶಾಸಕರು ಭೇಟಿಯಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಕಾರ್ಯಕರ್ತರು ಸೇರಿ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಶಾಸಕರು ಘಟನೆ ಬಗ್ಗೆ ಕೈಗೊಂಡ ನಿರ್ಣಯಗಳ ವಿವರಗಳನ್ನು ನೀಡಿದ್ದು, ಈ ಬಗ್ಗೆ ನಾವೆಲ್ಲ ಒಪ್ಪಿಗೆ ಸೂಚಿಸಿ ಶಾಸಕರನ್ನು ಕಾರಿನಿಂದ ಬಸ್ ಹತ್ತಿರ ಕಳುಹಿಸುವ ವೇಳೆ ಯಾವುದೇ ಒಂದು ಯುವಕರ ಗುಂಪು ಬಂದು ಶಾಸಕರ ವಿರುದ್ಧ ದಿಕ್ಕಾರವನ್ನು ಕೂಗಿದೆ.
ಶಾಸಕರು ಬಸ್ ಹತ್ತುತ್ತಿದ್ದ ವೇಳೆ ಯಾವುದೇ ಒಂದು ಗುಂಪು ಬಂದು ಬಸ್ಸಿನೆದುರು ಅಡ್ಡ ನಿಂತು ಶಾಸಕರ ವಿರುದ್ಧ ಘೋಷಣೆ ಕೂಗಿದ್ದು, ಈ ವೇಳೆ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ಬಿಜೆಪಿ ಕಾರ್ಯಕರ್ತರು ಆ ಗುಂಪನ್ನು ಚದುರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧವಿಲ್ಲದ ಗುಂಪಿನ ಯುವಕರು ಶಾಸಕರ ವಿರುದ್ಧ ಘೋಷಣೆ ಕೂಗಿದ್ದು, ಅವರು ಯಾವುದೇ ನಮ್ಮ ಸಂಘಟನೆಗಳ ಕಾರ್ಯಕರ್ತರಲ್ಲ ಎಂದು ಕಿಶೋರ್ ಶಿರಾಡಿ ರವರು ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಶಾಸಕ ಮಠಂದೂರು ರವರು ಈ ಪ್ರಕರಣದಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ಶಾಸಕರ ವಿರುದ್ಧ ಘೋಷಣೆ ಕೂಗಿ ಗದ್ದಲ ಸೃಷ್ಟಿಸಿದ ಗುಂಪಿನವರು ಯಾವುದೇ ಸಂಘಟನೆ ಕಾರ್ಯಕರ್ತರಲ್ಲ ಎಂದಿದ್ದಾರೆ.