ವಿಟ್ಲ: ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಲ ಮುಡ್ನೂರು ಗ್ರಾಮದ ಕೊಡಾಜೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ವಿಟ್ಲ ಪೊಲೀಸರು ಆರು ಮಂದಿ ಆರೋಪಿಗಳ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಯೋಗೀಶ್ , ಮಹಮ್ಮದ್ ಶರೀಫ್ , ಬಾಬು @ ಯಾದವ ಅವರನ್ನು ಬಂಧಿಸಲಾಗಿದ್ದು, ಕಿಶೋರ್ ಕೊಡಾಜೆ, ರವಿ ಕೊಡಾಜೆ, ಜಗದೀಶ್ ಏಮಾಜೆ ಅವರು ಪರಾರಿಯಾಗಿದ್ದಾರೆ.
ಇವರು ನೆಟ್ಲ ಮುಡ್ನೂರು ಗ್ರಾಮದ ಕೊಡಾಜೆ ಎಂಬಲ್ಲಿ ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಉಲಾಯಿ-ಪಿದಾಯಿ ಆಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿ, ಅವರಿಂದ ಒಟ್ಟು ಹಣ 1370. ರೂ ಹಾಗೂ ವಿವಿಧ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.