ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಕಂಬಳಬೆಟ್ಟು ಕೊಲಂಬೆ ಸೇತುವೆ, ಮಚ್ಚ ಸೇತುವೆ ಬಲಿ ಮತ್ತು ಮಾಮೇಶ್ವರ ಕಟ್ಟೆಯಿಂದ ಒಕ್ಕೆತ್ತೂರು ಮಲರಾಯ ದೈವಸ್ಥಾನದವರೆಗೆ ಹಾಗೂ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮಚ್ಚ ಮಂಗಲಪದವುವರೆಗೆ ಸಾರ್ವಜನಿಕರು ಮಾಂಸದ ತ್ಯಾಜ್ಯ ಮತ್ತು ಕಸ ಎಸೆಯುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸಾರ್ವಜನಿಕರು ಮಾಂಸದ ತ್ಯಾಜ್ಯ ಮತ್ತು ಕಸ ಎಸೆಯುತ್ತಿದ್ದು, ಅದನ್ನು ನಾಯಿಗಳು ಮತ್ತು ಕಾಗೆಗಳು ಮನೆಗಳಿಗೆ ಎಳೆದು ತರುತ್ತಿದ್ದು ರೋಗ ಹರಡುವ ಸಾಧ್ಯತೆಯಿದೆ ತಕ್ಷಣ ವಿಟ್ಲ ಪಟ್ಟಣ ಪಂಚಾಯತ್ ಮತ್ತು ವೀರಕಂಭ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.