ಮಂಗಳೂರು: ನಿಯಮ ಮೀರಿ ಧ್ವನಿವರ್ಧಕ ಬಳಕೆ ತಡೆಗೆ ಮಂಗಳೂರು ಪೊಲೀಸರು ಮುಂದಾಗಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1001 ಸ್ಥಳಗಳಿಗೆ ನೋಟೀಸು ನೀಡಿದ್ದಾರೆ.
ನಗರದಲ್ಲಿ 357 ದೇವಸ್ಥಾನ, 168 ಮಸೀದಿ, 95 ಚರ್ಚ್ ಗಳಿಗೆ , 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳ ಗಳು, 98 ಮನರಂಜನಾ ಸ್ಥಳಗಳಿಗೆ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ.
ಮಂಗಳೂರಿನ 1001 ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಇಂತಿಷ್ಟು ಡೆಸಿಬಲ್ ಗಿಂತ ಮೀರಬಾರದು ಎಂಬ ನಿಯಮವಿದ್ದು ಅದನ್ನು ಪಾಲಿಸುವಂತೆ ಸೂಚನೆ ನೀಡಿ ನೋಟಿಸ್ ನೀಡಲಾಗಿದೆ.ನಿಯಮ ಉಲಂಘಿಸಿದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಮಂಗಳೂರು ಪೊಲೀಸರು ಸರಕಾರ ಹಾಗೂ ಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.