ಬೆಳ್ತಂಗಡಿ: ಮನೆಯೊಂದರಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ನಡ ಗ್ರಾಮದ ಮಂಜದ ಪಲ್ಕೆ ಎಂಬಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ನಡ ಗ್ರಾಮದ ಮಂಜದ ಪಲ್ಕೆ ಬಶೀರ್ ಎನ್ನಲಾಗಿದೆ.
ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಿರುವ ವೇಳೆ ಬಂದ ಖಚಿತ ಮಾಹಿತಿ ಮೇರೆಗೆ ಬಶೀರ್ ಮನೆಗೆ ದಾಳಿ ನಡೆಸಿದ ವೇಳೆ ಕೋಣೆಯಲ್ಲಿ ಮಾಂಸಕ್ಕಾಗಿ ಕುತ್ತಿಗೆ ಕೊಯಿದು ಕೊಂದು ಹಾಕಿದ ಒಂದು ಹೋರಿ ಮತ್ತು ಕರು ಪತ್ತೆಯಾಗಿದ್ದು, ಆರೋಪಿಯನ್ನು ಮತ್ತು ಕೃತ್ಯಕ್ಕಾಗಿ ಬಳಸಿದ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ವಶ ಪಡೆದುಕೊಂಡ ವಸ್ತುಗಳ ಅಂದಾಜು ಮೌಲ್ಯ 80000 ಆಗಿದ್ದು, ಈ ಬಗ್ಗೆ ಠಾಣೆಯಲ್ಲಿ ಅಕ್ರ ನಂ:23/2022
ಕಲಂ: 4,5,7,8,12 ಕರ್ನಾಟಕ ಗೋಹತ್ಯೆ ಪ್ರತಿಬಂಧಕ & ಸಂರಕ್ಷಣಾ ಆಧ್ಯಾದೇಶ ನಿಯಮ 2020 ರನ್ವಯ ಪ್ರಕರಣ ದಾಖಲಾಗಿದೆ.