ಉಡುಪಿ: ಪ್ರವಾಸಕ್ಕೆ ಬಂದಿದ್ದ ಮೂವರು ಯುವಕರು ಸಮುದ್ರದಲ್ಲಿ ಈಜಾಡಲು ಹೋಗಿ ನೀರುಪಾಲಾದ ಘಟನೆ ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಬೀಚ್‌ನಲ್ಲಿ ನಡೆದಿದೆ.
ಮೃತಪಟ್ಟ ಯುವಕರನ್ನು ಕೇರಳದ ಕೊಟ್ಟಾಯಂನ ಮಂಗಳ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಅಲೆನ್ ರೇಜಿ, ಅಮಲ್ ಸಿ ಅನಿಲ್, ಅಂಟೋನಿ ಶೆಣೈ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
42 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ಕೇರಳದಿಂದ ಮಲ್ಪೆಗೆ ಪ್ರವಾಸಕ್ಕೆ ಬಂದಿದ್ದರು. ಆದರೆ ದ್ವೀಪ ಪ್ರದೇಶದ ಅಪಾಯಕಾರಿ ಸಮುದ್ರ ಭಾಗದಲ್ಲಿ ಇಳಿದ ಮೂವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಡೆಯಾಗಿ ಸಾವನ್ನಪ್ಪಿದ್ದಾರೆ.
ಈಗಾಗಲೇ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು, ಮುಳುಗಡೆಯಾದ ಮತ್ತೋರ್ವ ವಿದ್ಯಾರ್ಥಿ ಅಂಟೋನಿ ಶೆಣೈಗೆ ಶೋಧ ಕಾರ್ಯ ನಡೆಯುತ್ತಿದೆ.