ಮಂಗಳೂರು: ಅಪಘಾತ ಸಂಭವಿಸಿ ಬೆಂಕಿ ತಗುಲಿದ ಪರಿಣಾಮ ಸಿಟಿ ಬಸ್ ಹಾಗೂ ಬೈಕ್ ಹೊತ್ತಿ ಉರಿದ ಘಟನೆ ನಗರದ ಹಂಪನಕಟ್ಟೆ ಬಳಿಯ ವೆನ್ಲಾಕ್ ಆಸ್ಪತ್ರೆ ಬಳಿ ಏ.8 ರಂದು ಮಧ್ಯಾಹ್ನ ನಡೆದಿದೆ.
ಬೈಕ್ ಬಂದು ಬಸ್‌ಗೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ಬಸ್ಸು ಹಾಗೂ ಬೈಕ್ ಎರಡು ವಾಹನಕ್ಕೂ ಬೆಂಕಿ ತಗುಲಿದೆ ಎನ್ನಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ವ್ಯಾಪಿಸುವುದನ್ನು ತಡೆದಿದ್ದು, ಖಾಸಗಿ ಬಸ್ ಬಹುಪಾಲು ಸುಟ್ಟು ಹೋಗಿದ್ದು, ಬೈಕ್ ಸಂಪೂರ್ಣವಾಗಿ ಸುಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.