ಬೆಳ್ಳಾರೆ: ಠಾಣಾ ವ್ಯಾಪ್ತಿಯ ಪಾಲ್ತಾಡಿ ಗ್ರಾಮದ ಬೊಳಿಯಾಲ ನಿವಾಸಿ ಸೇಸಪ್ಪ ಪೂಜಾರಿ(65)ಎಂಬವರು ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ಅದೇ ಗ್ರಾಮದ ಗುಡ್ಡದಲ್ಲಿ ಅವರ ಶವ ಪತ್ತೆಯಾಗಿದೆ.
ಯಾರಾದರೂ ಕೊಲೆ ಮಾಡಿ ಗುಡ್ಡದಲ್ಲಿ ಎಸೆದಿದ್ದಾರೆಯೇ ಎಂಬ ಸುದ್ದಿ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಸೇಸಪ್ಪ ಪೂಜಾರಿ ನಾಪತ್ತೆಯಾಗಿದ್ದ ಸಂದರ್ಭ ಸಂಬಂಧಿಕರು “ಸೇಸಪ್ಪ ಪೂಜಾರಿ ಯವರು ಸಕಲೇಶಪುರದಲ್ಲಿ ಹೋಟೆಲು ಮಾಡಿದ್ದಾರೆಂದು” ಹೇಳುತ್ತಿದ್ದು, ಇದೀಗ ಮೃತದೇಹ ಗುಡ್ಡದಲ್ಲಿ ಸಿಕ್ಕಿದ್ದು, ಸಾವಿನ ಬಗ್ಗೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಸೇಸಪ್ಪ ಪೂಜಾರಿಯ ಸಾವಿನ ಹಿಂದಿನ ಸತ್ಯಾಸತ್ಯತೆಯನ್ನು ಬಯಲಾಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.