ಮಂಗಳೂರು: ಮೊಬೈಲ್ ಶಾಪಿನಿಂದ ಬಾಲಕಿಯೊಬ್ಬಳ ಮೊಬೈಲ್ ನಂಬರ್ ಕದ್ದು, ಆಕೆಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸಿದ ಆರೋಪದಲ್ಲಿ ಇಬ್ಬರ ವಿರುದ್ದ ಮಂಗಳೂರಿನ ಸೈಬರ್ ಅಪರಾಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ನ ಆಫ್ರಿದ್ ಹಾಗೂ ಮುನ್ನಾ ಆರೋಪಿಗಳು. ಆಫ್ರಿದ್ ಎಂಬಾತನಿಗೆ ಮೊಬೈಲ್ ಅಂಗಡಿಯಿದ್ದು ಅಲ್ಲಿಂದ ಬಾಲಕಿಯ ತಂದೆ ಮೊಬೈಲ್ ಮತ್ತು ಸಿಮ್ ಖರೀದಿಸಿದ್ದರು. ಆಕೆಯ ತಂದೆ ಮಗಳಿಗೆ ಆನ್ ಲೈನ್ ಕ್ಲಾಸ್ ಗೆ ಸಹಾಯ ಆಗಲೆಂದು ಮೊಬೈಲ್ ತೆಗೆಸಿಕೊಟ್ಟಿದ್ದರು. ಈ ಸಂದರ್ಭ ಅಫ್ರಿದಿ ಬಾಲಕಿಯ ನಂಬರ್ ನೋಟ್ ಮಾಡಿಟ್ಟು ಕೊಂಡಿದ್ದ, ಬಾಲಕಿಯ ಮೊಬೈಲಿಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದ.
ಈ ನಡುವೆ ಮೊಬೈಲ್ ಹಾಳಾಗಿದ್ದು ಬಾಲಕಿಯ ತಂದೆ ರಿಪೇರಿಗೆಂದು ಆತನ ಅಂಗಡಿಗೆ ನೀಡಿದ್ದು ಅಫ್ರಿದ್ ಈ ವೇಳೆ ಮೊಬೈಲ್ ನಲ್ಲಿದ್ದ ಬಾಲಕಿಯ ಫೋಟೋ, ವಿಡಿಯೋಗಳನ್ನು ಕದ್ದು ಡೌನ್ಲೋಡ್ ಮಾಡಿಕೊಂಡು, ಆತನ ಗೆಳೆಯ ಮುನ್ನ ಎಂಬಾತನ ಮೂಲಕ ವೈರಲ್ ಮಾಡಿದ್ದ. ಈ ಬಗ್ಗೆ ವಿಷಯ ತಿಳಿದ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು ಅವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.