ತುಮಕೂರು: ಕೊರೊನಾ ಟಫ್ ರೂಲ್ಸ್ ಹಾಗೂ ಜನ ಸಂಖ್ಯೆ ಮಿತಿ ಉಪಚುನಾವಣೆಗೆ ಅಪ್ಲೈ ಆಗೋದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ತಿಪಟೂರಿನಲ್ಲಿ ಮಾತನಾಡಿದ ಸಿಎಂ, ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕಾರ್ಯಕ್ರಮಕ್ಕೆ ಮಿತಿ ಷರತ್ತು ಹಾಕಿದ್ದೇವೆ.
ಸಾರ್ವಜನಿಕ ಸಭೆಗಳಿಗೆ ಯಾವುದೇ ನಿಬಂಧನೆ ಹಾಕಿಲ್ಲ ಅಂತರ ಕಾಯ್ದುಕೊಂಡು, ಮಾಸ್ಕ್ ಹಾಕಿಕೊಂಡು ಎಚ್ಚರಿಕೆಯಿಂದ ಕಾರ್ಯಕ್ರಮ ಮಾಡಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಶಾಲಾ-ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲ. ಒಂದು ವಾರ ತಡೆದು ಜನ ಸುಧಾರಿಸದೇ ಇದ್ದರೆ ಅಥವಾ ಕೋವಿಡ್ ಸಂಖ್ಯೆ ಜಾಸ್ತಿ ಆಗ್ತಿದ್ರೆ ಪರಿಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ.
ಇದೇ ವೇಳೆ ಕೊರೊನಾ ಹಣ ದುರುಪಯೋಗವಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಖರ್ಚಿನ ವಿವರ ವಿಧಾನಮಂಡಲದಲ್ಲಿ ಕೊಟ್ಟಿದ್ದೇವೆ. ದುರುಪಯೋಗ ಆಗಿದೆ ಅಂತ ಹೇಳೋದು ಸುಲಭ. ಸಾಕ್ಷ್ಯಾಧಾರ ಇಲ್ಲದೆ ಈ ಆರೋಪ ಮಾಡೋದು ವಿರೋಧ ಪಕ್ಷದ ನಾಯಕರಿಗೆ ಶೋಭೆಯಲ್ಲ ಎಂದು ಗರಂ ಆದರು.