ಮೂಡುಬಿದಿರೆ: ಮನೆಯಲ್ಲಿ ಪತ್ನಿ ಹಾಗೂ 7 ವರ್ಷದ ಮಗು ಏಕಾಏಕಿ ಮನೆಯಿಂದ ನಾಪತ್ತೆಯಾದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜುನಾಥ ಗೌಡ ಎಂಬುವವರು ಏ.8ರಂದು ಕೆಲಸದ ನಿಮಿತ್ತ ಬೆಳಿಗ್ಗೆ ಮನೆಯಿಂದ ಹೊರಹೋಗುವ ವೇಳೆ ಮನೆಯಲ್ಲಿದ್ದ ಪತ್ನಿ ರಂಜಿನಿಯವರ ಬಳಿ ಹೇಳಿ ಹೋಗಿದ್ದರು.
ಇದೇ ವೇಳೆ ಮಗು ಸಹ ಮನೆಯಲ್ಲಿತ್ತು. ಅದೇ ದಿನ ಸಂಜೆ 7.30ಕ್ಕೆ ಮನೆಗೆ ಬಂದಾಗ ಮನೆಗೆ ಬೀಗ ಹಾಕಿದ್ದು, ಬೀಗ ತೆಗೆದು ನೋಡಿದಾಗ ತಾಯಿ ಮತ್ತು ಮಗು ಮನೆಯಲ್ಲಿರಲಿಲ್ಲ.
ಈ ಬಗ್ಗೆ ನೆರೆಹೊರೆ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.




























