ವಿಟ್ಲ: ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 7ರ ಪ್ರಾಂತೀಯ ಅಧ್ಯಕ್ಷರಾಗಿ ಸುದರ್ಶನ್ ಪಡಿಯಾರ್ ರವರನ್ನು 2022-23ನೇ ಸಾಲಿನ ಜಿಲ್ಲಾ ಗವರ್ನರ್ ಸಂಚಿತ್ ಶೆಟ್ಟಿ ರವರು ನೇಮಕಗೊಳಿಸಿದ್ದಾರೆ.
ಸುದರ್ಶನ್ ಪಡಿಯಾರ್ ರವರು ಲಯನ್ಸ್ ಕ್ಲಬ್ ನ ವಿವಿಧ ಹುದ್ದೆಗಳನ್ನು ಅಲಂಕರಿಸಿ, 2016-17 ರಲ್ಲಿ ಲಯನ್ಸ್ ವಿಟ್ಲದ ಅಧ್ಯಕ್ಷರಾಗಿ ಇಡೀ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದ ಹೆಗ್ಗಳಿಕೆ ಇವರದ್ದಾಗಿದೆ. ವಲಯ ಅಧ್ಯಕ್ಷರಾಗಿ ಜಿಲ್ಲೆಯಲ್ಲಿ ಉತ್ತಮ ವಲಯ ಅಧ್ಯಕ್ಷ ಗೌರವವನ್ನು ಪಡೆದಿದ್ದಾರೆ. ನಂತರದ ದಿನಗಳಲ್ಲಿ ಗವರ್ನರ್ ರವರ ಪ್ರಾಂತೀಯ ಸಲಹೆಗಾರರಾಗಿ, ಗವರ್ನರ್ ಪ್ರತಿನಿಧಿಯಾಗಿ ವಿವಿಧ ಹುದ್ದೆಯನ್ನು ಅಲಂಕರಿಸಿದ ಅವರು, 2022-23ನೇ ಸಾಲಿನಲ್ಲಿ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸುದರ್ಶನ್ ಪಡಿಯಾರ್ ರವರು ವಿಟ್ಲ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದು,ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷರಾಗಿ ಉತ್ತಮ ಕಾರ್ಯಗಳ ನಿರ್ವಹಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.