ಪುತ್ತೂರು: ಜಾತ್ರೋತ್ಸವಕ್ಕೆ ದೇವಸ್ಥಾನದ ಗೋಪುರದ ಮೇಲೆ ಅಳವಡಿಸಿದ್ದ ಪ್ರಭಾವಳಿ ಮಾದರಿಯ ವಿದ್ಯುತ್ ದೀಪಾಲಂಕಾರಗಳು ಗಾಳಿ ಮಳೆಗೆ ಉರುಳಿ ಬಿದ್ದ ಹಿನ್ನೆಲೆ ಗಾಯಗೊಂಡವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ತಂಡ ಭೇಟಿಯಾಗಿ ಶ್ರೀ ದೇವರ ಪ್ರಸಾದ ನೀಡಿ, ಯೋಗಕ್ಷೇಮ ವಿಚಾರಿಸಿದರು.
ನಿನ್ನೆ ಸಂಜೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗೋಪುರದ ಮೇಲೆ ಇರಿಸಿದ್ದ ಪ್ರಭಾವಳಿ ಮಾದರಿಯ ವಿದ್ಯುತ್ ದೀಪಾಲಂಕಾರಗಳು ಉರುಳಿ ಬಿದ್ದು ಕೆಳ ಭಾಗದಲ್ಲಿದ್ದ ಭಕ್ತಾದಿಗಳಿಗೆ ಗಾಯಗಳಾಗಿದ್ದು, ಗಾಯಗೊಂಡ ಇಬ್ಬರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.