ಲಕ್ನೋ: ಮಹರ್ಷಿ ಶ್ರೀ ಲಕ್ಷ್ಮಣ್ ದಾಸ್ ಉದಾಸಿ ಆಶ್ರಮದ ಬಜರಂಗ ಮುನಿ ದಾಸ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ಮತ್ತು ಮುಸ್ಲಿಂ ಮಹಿಳೆಯರಿಗೆ “ಅತ್ಯಾಚಾರ ಬೆದರಿಕೆ” ನೀಡಿದ ವೈರಲ್ ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿದಂತೆ ಭಜರಂಗ ಮುನಿ ದಾಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ ನಾಲ್ಕು ದಿನಗಳ ನಂತರ ಸೀತಾಪುರ ಪೊಲೀಸರು ಮಹಂತ್ ಬಜರಂಗ ಮುನಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೀತಾಪುರದ ಖೈರಾಬಾದ್ ಪಟ್ಟಣದ ಮಹರ್ಷಿ ಶ್ರೀ ಲಕ್ಷ್ಮಣ್ ದಾಸ್ ಉದಾಸೀನ್ ಆಶ್ರಮದ ಮಹಂತರಾದ ಬಜರಂಗ ಮುನಿ ದಾಸ್ ರವರು ಏ. 2 ರಂದು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದರು.
ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಬೆದರಿಕೆ ಹಾಕುವ ಮಾತುಗಳು ಅದರಲ್ಲಿ ಕೇಳಿ ಬಂದಿದ್ದವು. ಅದರ ವೀಡಿಯೊ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಆ ಮಾತುಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಹಲವರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ತಕ್ಷಣ ಮಧ್ಯ ಪ್ರವೇಶಿಸಿ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿದ್ದರು.