ಉಳ್ಳಾಲ: ಮನೆಯಿಂದ ದಿಢೀರ್ ಆಗಿ ಕಾಣೆಯಾಗಿ ಮನೆಯವರನ್ನು ಗಾಬರಿಪಡಿಸಿದ್ದ ಬಾಲಕ ಹುಡುಕಾಡಿ ಕೊನೆಗೂ ಆತನ ಅಜ್ಜಿಯ ಮನೆಯಲ್ಲಿ ಪತ್ತೆಯಾದ ಘಟನೆ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿ ನಡೆದಿದೆ.
ಉಳ್ಳಾಲ ಬೈಲು ಗಣೇಶನಗರದ ಬಾಡಿಗೆ ಮನೆ ನಿವಾಸಿಗಳಾದ ಜಿತನ್ ರಸ್ಕಿನ ಮತ್ತು ರೋಹಿತ ಬ್ರಾಕ್ಸ್ ದಂಪತಿಯ ಪುತ್ರ ರಿಯಾನ್ (9) ಬೆಳಗ್ಗೆ ಸ್ನೇಹಿತರೊಂದಿಗೆ ತೊಕ್ಕೊಟ್ಟು ಚರ್ಚ್‌ಗೆ ತೆರಳಿದ್ದು ಮಧ್ಯಾಹ್ನ ವಾಪಾಸಾಗಿದ್ದ.
ಆ ಬಳಿಕ ಪಕ್ಕದಲ್ಲೇ ಇರುವ ದೊಡ್ಡಮ್ಮನ ಮನೆಗೆ ತೆರಳಿದ್ದು, ಅಲ್ಲಿದ್ದ ರಿಯಾನ್ ತಾಯಿ ಮನೆಯ ಕೀಲಿ ಕೈ ಕೊಟ್ಟು ರಿಯಾನ್‌ನಲ್ಲಿ ಮನೆಗೆ ಹೋಗಲು ಹೇಳಿದ್ದರು. ಆದರೆ 2 ಗಂಟೆ ಸುಮಾರಿಗೆ ತಾಯಿ ಮನೆಗೆ ತೆರಳಿದಾಗ ಕಿಟಕಿಯಲ್ಲಿ ಮನೆಯ ಕೀಲಿ ಕೈ ಮಾತ್ರ ಇದ್ದು ರಿಯಾನ್ ನಾಪತ್ತೆಯಾಗಿದ್ದ.
ಗಾಬರಿಗೊಂಡ ರಿಯಾನ್ ಪೋಷಕರು, ಸ್ಥಳೀಯರು ಶೋಧ ನಡೆಸಿದ್ದು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸಿ ಶೋಧ ಕಾರ್ಯ ಆರಂಭಿಸಿದ್ದರು.
ಕೊನೆಗೂ ಸಂಜೆ ಹೊತ್ತಲ್ಲಿ ತನ್ನ ಅಜ್ಜಿ ಮನೆಯ ತೋಟದಲ್ಲಿ ರಿಯಾನ್ ಪತ್ತೆಯಾಗಿದ್ದಾನೆ.