ಮುಂಬೈ: ಉಡದ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ನಾಲ್ವರು ಬೇಟೆಗಾರರನ್ನು ಮಹಾರಾಷ್ಟ್ರ ಅರಣ್ಯ ಇಲಾಖೆ ಬಂಧಿಸಿದೆ. ವರದಿಗಳ ಪ್ರಕಾರ, ಈ ಘಟನೆಯು ಗೋಥಾಣೆಯ ಗಭಾ ಪ್ರದೇಶದಲ್ಲಿ ನಡೆದಿದೆ.
ಈ ನಾಲ್ವರು ವ್ಯಕ್ತಿಗಳು ಕಾಡಿನಲ್ಲಿ ತಿರುಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ ಎಂದು ಸಾಂಗ್ಲಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಮೊದಲು ಒಬ್ಬ ಶಂಕಿತನನ್ನು ಬಂಧಿಸಿದ್ದು, ಆತನ ಮೊಬೈಲ್ ಪರಿಶೀಲಿಸಿದಾಗ ಆಘಾತಕಾರಿ ವಿಡಿಯೋ ನೋಡಿ ಅರಣ್ಯಾಧಿಕಾರಿಗಳು ಶಾಕ್ ಆಗಿದ್ದಾರೆ.
ಕೃತ್ಯದ ವೀಡಿಯೋ ಮತ್ತು ಫೋಟೋಗಳು ಮೊಬೈಲ್‍ನಲ್ಲಿ ಪತ್ತೆಯಾಗಿದೆ. ಉಳಿದ ಆರೋಪಿಗಳನ್ನು ರತ್ನಗಿರಿ ಜಿಲ್ಲೆಯಿಂದ ಬಂಧಿಸಲಾಗಿದೆ.