ವಿಟ್ಲ: ಮೈರ ಅಂಗನವಾಡಿ ಕೇಂದ್ರಕ್ಕೆ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ರೊಟೆರಿನ್ ಎ.ಆರ್. ರವೀಂದ್ರ ಭಟ್ ಹಾಗೂ ರೋಟರಿ ಕ್ಲಬ್ ಜಿಲ್ಲಾ ಉಪ ಗವರ್ನರ್ ರೊಟೆರಿನ್ ಸುರೇಂದ್ರ ಕಿಣಿ ಎ.19 ರಂದು ಭೇಟಿ ನೀಡಿ, ಅಂಗನವಾಡಿ ಕೇಂದ್ರಕ್ಕೆ 19 ಚೆಯರ್ ಗಳನ್ನು ವಿತರಿಸಿದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಅಣ್ಣಪ್ಪ ಶಾಸ್ತನ, ಕಾರ್ಯದರ್ಶಿ ರೊಟೆರಿನ್ ಸೋಮಶೇಖರ್ ಹಾಗೂ ರೊಟೆರಿನ್ ಮೋಹನ್ ಎ., ರೋಟರಿ ಕ್ಲಬ್ ನ ಎಲ್ಲಾ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಅಂಗನವಾಡಿಯ ಪುಟಾಣಿ ಫಾಯಿದಾಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ, ಪುರುಷೋತ್ತಮ ಕಲ್ಲಂಗಳ, ಅಂಗನವಾಡಿ ಮೇಲ್ವಿಚಾರಕರಾದ ಸೋಮಕ್ಕ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಲೋಲಾಕ್ಷಿ, ಸದಸ್ಯೆ ದಿವ್ಯ ಹಾಗೂ ಅಂಗನವಾಡಿ ಸಹಾಯಕಿ ಗುಲಾಬಿ, ಮಕ್ಕಳ ಪೋಷಕರು, ಉಪಸ್ಥಿತರಿದ್ದರು.