ಕಾಸರಗೋಡು: ಮಾ.21 ರ ಮಧ್ಯರಾತ್ರಿ ಕಾಸರಗೋಡು ಮಣಿಯಂಪಾರೆ ಸೈಂಟ್ ಲಾರೆನ್ಸ್ ಚರ್ಚ್ನ ಪ್ರತಿಮೆಗೆ ದುಷ್ಕರ್ಮಿಗಳು ಹಾನಿಗೈದಿದ್ದಾರೆ. ಮಾ.22 ರ ಬೆಳಿಗ್ಗೆ ಯುವಕನೊಬ್ಬ ಗಾಜಿಗೆ ಹಾನಿಯಾಗಿರುವುದನ್ನು ಗಮನಿಸಿದ ವೇಳೆ ಪ್ರತಿಮೆಯನ್ನು ಧ್ವಂಸ ಮಾಡಿರುವುದು ಬೆಳಕಿಗೆ ಬಂದಿದೆ.
ಮಾ.21 ಮಧ್ಯರಾತ್ರಿ ದುಷ್ಕರ್ಮಿಗಳು ಮಣಿಯಂಪಾರೆ ಚರ್ಚ್ನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ಧಾವಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ನಾಮನಿರ್ದೇಶಿತ ಅಧ್ಯಕ್ಷ ರಾಜು ಸ್ಟೀಫನ್ ಡಿ ಸೋಜಾ, ಕುಂಬ್ಳೆ, ಕಾಸರಗೋಡಿನ ಕ್ಯಾಥೊಲಿಕ್ ಸಭಾದ ಅಧ್ಯಕ್ಷ ವಿಲ್ಫ್ರೆಡ್ ಮನೋಹರ್ ಕ್ರಾಸ್ತಾ ಅವರು ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.