ಕಿನ್ನಿಗೋಳಿ: ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಕಂಬಳದ ಎರಡು ಕೋಣಗಳ ಪೈಕಿ ಒಂದು ಕೋಣ ನಾಪತ್ತೆಯಾದ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆಯಲ್ಲಿ ನಡೆದಿದೆ.
ಏಳಿಂಜೆಯ ಲೋಕನಾಥ ಶೆಟ್ಟಿ ಅಂಗಡಿಗುತ್ತು ರವರ ಕೋಣವನ್ನು ಗದ್ದೆಯಲ್ಲಿ ಕಟ್ಟಿ ಹಾಕಲಾಗಿತ್ತು.
ಕಟ್ಟಿದ ಸ್ಥಳದಿಂದ ಒಂದು ಕೋಣವು ನಾಪತ್ತೆಯಾಗಿದೆ. ಮತ್ತೊಂದು ಕೋಣವು ಸ್ಥಳದಲ್ಲೇ ಇತ್ತು. ನಾಪತ್ತೆಯಾದಾಗಿನಿಂದ ಪರಿಸರದ ಸುತ್ತಮುತ್ತ ಕೋಣದ ಹುಡುಕಾಟ ನಡೆಸಲಾಗಿದ್ದು,ಇದುವರೆಗೆ ಕೋಣ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.