ವಿಟ್ಲ: ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳನೊಬ್ಬ ಹಾಡಹಗಲೇ ಮನೆಯೊಂದರಿಂದ ಅಡಿಕೆ ಕಳವುಗೈದು ಪರಾರಿಯಾಗಿದ್ದು, ಕಳ್ಳತನದ ದೃಶ್ಯವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಾಣಿ ಸಮೀಪದ ನೆಟ್ಲ ಮುಡ್ನೂರು ಮತ್ತು ಮಾಣಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ.
ಹಾಡಹಗಲೇ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಬಂದು ಮನೆಯ ಜಗಲಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ಅಡಿಕೆ ಚೀಲವನ್ನು ಎಗರಿಸಿ ಪರಾರಿಯಾಗಿದ್ದಾನೆ.
