ಪುತ್ತೂರು: ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ 2021-22ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಕಮಿಷನ್ ಕ್ಲಾಸ್ (ಪ್ರದರ್ಶನ ತರಗತಿ) ಬೆಳ್ಳಾರೆಯ ಜ್ಞಾನದೀಪ ಸಂಸ್ಥೆಯಲ್ಲಿ ನಡೆಯಿತು.
ಕಾಸರಗೋಡು ಜಿಲ್ಲೆಯ ಸೂರಂಬೈಲು ಜಿಹೆಚ್ಎಸ್ಎಸ್ ಶಾಲೆಯ ಶಿಕ್ಷಕಿಯರುಗಳಾದ ಶೋಭನಾ ಮತ್ತು ಕನಕ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರು ಒಂದು ವರ್ಷದಲ್ಲಿ ನಡೆಸಿದ ವಿವಿಧ ಶೈಕ್ಷಣಿಕ ಚಟುವಟಿಕೆಗಳು, ದಾಖಲೆಗಳು, ಪ್ರಾಜೆಕ್ಟ್ ಗಳು, ಪ್ರಾಯೋಗಿಕ ತರಗತಿಗಳು, ಹಾಗೂ ಸಂವಹನ ತರಗತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ಶಿಕ್ಷಕಿಯರು ಮಗುವಿಗೆ ಗುರುತಿಸಿ ಕಲಿಯಲು ಅವಕಾಶ ಮಾಡಿಕೊಡುವ ಮೊಂಟೆಸ್ಸರಿ ಕಲಿಕಾ ಪದ್ಧತಿಯ ವಿವಿಧ ಅಧ್ಯಯನದ ಮಾದರಿಗಳು ಸೇರಿದಂತೆ ಸಂಗ್ರಹಿಸಿದ ಅಪರೂಪದ ಪಾರಂಪರಿಕ ವಸ್ತುಗಳನ್ನು ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಉಪನ್ಯಾಸಕ ಗಣೇಶ್ ನಾಯಕ್, ಮೊಂಟೆಸ್ಸರಿ ಶಿಕ್ಷಕಿ ಗೀತಾ ಬಾಲಚಂದ್ರ, ಉಪನ್ಯಾಸಕಿಯರುಗಳಾದ ಅಮಿತಾ ವೈ ಶೆಟ್ಟಿ, ರಕ್ಷಿತಾ ಉಸ್ಥಿತರಿದ್ದರು.