ಪುತ್ತೂರು: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ಇಡ್ಕಿದು ಗ್ರಾಮದ ಕೋಲ್ಪೆ ಬದ್ರಿಯ ಮದ್ರಸಾದ 7ನೇ ತರಗತಿ ವಿದ್ಯಾರ್ಥಿ ನಾಶಿಮ್ ಅಬೂಬಕ್ಕರ್ ಹಾಗೂ 5ನೇ ತರಗತಿಯ ವಿದ್ಯಾರ್ಥಿ ಶಹೀಮ್ ಅಹಮ್ಮದ್ ರವರು ಪುತ್ತೂರ್ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
10ನೇ ತರಗತಿಯ ವಿದ್ಯಾರ್ಥಿಗಳಾದ ಮೊಹಮ್ಮದ್ ಹಾಶಿಮ್ ಹಾಗೂ ಆಯಿಷತ್ ಸನಾ ರವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.

7ನೇ ತರಗತಿಯಲ್ಲಿ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ನಾಸೀಮ್ ಅಬ್ದುಲ್ ನಾಸಿರ್ ಕೋಲ್ಪೆ ಹಾಗೂ ನಸೀಮಾ ಅಬ್ದುಲ್ ನಾಸಿರ್ ದಂಪತಿಗಳ ಪುತ್ರರಾಗಿದ್ದು, 5ನೇ ತರಗತಿಯಲ್ಲಿ ಪುತ್ತೂರು ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಶಹೀಮ್, ಶಂಶುದ್ದೀನ್ ಹಾಗೂ ನಸೀಮಾ ದಂಪತಿಗಳ ಪುತ್ರಾಗಿರುತ್ತಾರೆ.
10ನೇ ತರಗತಿಯಲ್ಲಿ ಪುತ್ತೂರು ರೇಂಜ್ ಮಟ್ಟದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿ ಹಾಶಿಮ್, ಅಬ್ದುಲ್ ಹಕೀಮ್ ಹಾಗೂ ಹಫ್ಸ ದಂಪತಿಗಳ ಪುತ್ರರಾಗಿದ್ದು, ಅದೇ ರೀತಿ 10ನೇ ತರಗತಿಯಲ್ಲಿ ರೇಂಜ್ ಮಟ್ಟದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿನಿ ಇಕ್ಬಲ್ ಹಾಗೂ ಮೈಮುನಾ ದಂಪತಿಗಳ ಪುತ್ರಿಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಸಮಿತಿ ಹಾಗೂ ಅಧ್ಯಾಪಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.