ಕಾರ್ಕಳ: ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅಜೆಕಾರು ಎಂಬಲ್ಲಿ ನಡೆದಿದೆ.
ರಿಟ್ಜ್ ಕಾರನ್ನು ಅದರ ಚಾಲಕ ರಾಘವೇಂದ್ರ ನಾಯ್ಕ್ ಚಲಾಯಿಸುತ್ತಿದ್ದು, ಮರ್ಣೆ ಗ್ರಾಮದ ಹೆಮುಂಡೆ ಕ್ರಾಸ್ ಬಳಿ ಸಾಗುತ್ತಿದ್ದಾಗ ಎದುರುಗಡೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಿಂದಾಗಿ ಬೈಕ್ ಸವಾರ ಎಡ್ವಿನ್ ಗ್ಲಾಡಿಸನ್ ಪಿಂಟೋ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.