ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ರ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ ನ್ಯಾಯಾಲವು ತಿರಸ್ಕರಿಸಿದೆ ಎಂದು ವರದಿಯಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸ್ವಪ್ನಾ ಸುರೇಶ್‌ರ ವಿರುದ್ದ ರಾಷ್ಟ್ರೀಯ ತನಿಖಾ ದಳವು ಚಿನ್ನ ಕಳ್ಳಸಾಗಾಣೆಯ ಆರೋಪ ಗೈದಿದ್ದು ಈ ವಿಚಾರದಲ್ಲಿ ಜಾಮೀನು ನೀಡುವಂತೆ ಸ್ವಪ್ನಾ ಅರ್ಜಿ ಸಲ್ಲಿಸಿದ್ದರು.
ಸ್ವಪ್ನಾ ಸುರೇಶ್‌ಗೆ ಬಲವಂತಪಡಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಹೆಸರನ್ನು ಹೇಳುವಂತೆ ಒತ್ತಡ ಹೇರಲಾಗಿತ್ತು ಎಂಬ ಮಹತ್ವದ ಹೇಳಿಕೆಯನ್ನು ಭದ್ರತಾ ಸಿಬ್ಬಂದಿ ನೀಡಿದ್ದರು. ಈ ವಿಚಾರದಲ್ಲಿ ಕೇರಳ ಪೊಲೀಸರು ಈಡಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಿದ್ದರು.