ವಿಟ್ಲ: ವಿಶ್ವ ಹಿಂದೂ ಪರಿಷದ್, ಬಜರಂಗದಳ ವಿಟ್ಲ ಪ್ರಖಂಡ, ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ವತಿಯಿಂದ ಶ್ರೀ ರಾಮನವಮಿಯ ಪ್ರಯುಕ್ತ, ಶ್ರೀ ರಾಮ ಭಜನಾಮೃತ ಕಾರ್ಯಕ್ರಮವು ಮೇ.1 ರಂದು ನಡೆಯಲಿದ್ದು, ಈ ದಿನ ಸಂಜೆ ಮಕ್ಕಳಿಗೆ ಶ್ರೀರಾಮ ವೇಷಧಾರಿಗಳಾಗಿ ಭಾಗವಹಿಸಲು ಅವಕಾಶವಿದೆ.
ಮೇ.1 ರಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಜನಾ ಕಾರ್ಯಕ್ರಮ ನೆರವೇರಲಿದೆ.
ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ಧಾಮ ಮಾಣಿಲ, ವಿಟ್ಲ ಅರಮನೆಯ ಬಂಗಾರು ಅರಸರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.
ಮಧ್ಯಾಹ್ನ 3:00 ರಿಂದ 6:00 ರವರೆಗೆ ಕುಣಿತ ಭಜನೆ, ಭಜನಾ ಮಂಗಳೋತ್ಸವ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ರವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮೋತ್ಸವ ಸಮಿತಿ ವಿಟ್ಲ ಇದರ ಅಧ್ಯಕ್ಷರಾದ ಚರಣ್ ಕಾಪುಮಜಲು ರವರು ವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಧರ್ಮಪ್ರಸಾರ ಪ್ರಮುಖ್ ಕೃಷ್ಣ ಉಪಾಧ್ಯಾಯ ಹಾಗೂ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕರಾದ ಮುರಳಿಕೃಷ್ಣ ಹಸಂತಡ್ಕ ರವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ರಾವಣ ದಹನ ನಡೆಯಲಿದೆ.