ನೆಲ್ಯಾಡಿ: ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದ್ದು, ಸಿಡಿಮದ್ದು ಸಿಡಿಸಿ ಮೀನುಗಳನ್ನು ಸಾಯಿಸಿರುತ್ತಾರೆ. ಹಿಂದೂ ಶ್ರದ್ದಾ ಕೇಂದ್ರವಾದ ಉದನೆ ಮತ್ಸ್ಯಧಾಮದಲ್ಲಿ ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದು, ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ತೀವ್ರವಾಗಿ ಖಂಡಿಸಿದೆ.
ಮೀನಿನ ಶಿಕಾರಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದು, ಗೋಪಾಲಕೃಷ್ಣ ದೇವಸ್ಥಾನದ ಪಕ್ಕದಲ್ಲಿರುವ ಪ್ರಾಚೀನ ಮತ್ಸ್ಯಧಾಮದಲ್ಲಿ ಸಿಡಿಮದ್ದು ಸಿಡಿಸಿದ್ದರಿಂದಲೇ ಮೀನುಗಳು ಸತ್ತು ಹೋಗಿವೆ, ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಸಂಬಂಧಪಟ್ಟ ಇಲಾಖೆ ಎಚ್ಚರ ವಹಿಸಬೇಕು, ತಪ್ಪಿದ್ದಲ್ಲಿ ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.