ಪುಂಜಾಲಕಟ್ಟೆ: ವುಡ್ ವರ್ಕ್ಸ್ ಶಾಪ್ ಅನ್ನು ನಡೆಸುತ್ತಿರುವ ಉದ್ಯಮಿಯೋರ್ವರು ತನ್ನ ಅಂಗಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪುಂಜಾಲಕಟ್ಟೆಯ ನೆರಳಕಟ್ಟೆ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ನೇರಳಕಟ್ಟೆ ಕುಲಾಲು ದರ್ಖಾಸು ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.

ಹರೀಶ್ ರವರು ತನ್ನ ಫರ್ನಿಚರ್ ಶಾಪ್ ನಲ್ಲಿ ಎಲ್ಲಾ ವಿಧದ ಮರದ ಪೀಠೋಪಕರಣಗಳನ್ನು ತಯಾರಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.