ಪುತ್ತೂರು: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಶ್ರಮಪಟ್ಟು ತರಕಾರಿ ಕೃಷಿ ಮಾಡಿ ಕೋಟ್ಯಾಧೀಶ್ವರನಾದ ರೈತ ಧರ್ಣಪ್ಪ ಗೌಡ ಕುಂಟ್ಯಾನ (80ವ) ಮಾ.22ರಂದು ವಯೋಸಹಜ ಆರೋಗ್ಯ ಸಮಸ್ಯೆಯಿಂದ ನಿಧನರಾದರು.
ಕುಂಟ್ಯಾನ ಸದಾಶಿವ ದೇವಸ್ಥಾನದ ಮಾಜಿ ಮೊಕ್ತೇಸರಾಗಿ, ಕುಂಟ್ಯಾನ ದೇವಸ್ಥಾನದ ಜೀರ್ಣೋದ್ಧಾರದ ಹರಿಕಾರರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮಾ.22ರಂದು ಚಾರ್ವಾಕ ಮನೆಯಲ್ಲಿ ನಿಧನರಾದರು. ಅವರ ಪುತ್ರ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ಪ್ರವೀಣ್ ಕುಂಟ್ಯಾನರೂ ಪ್ರಗತಿಪರ ಕೃಷಿಕರಾಗಿದ್ದಾರೆ.