ಕಡಬ: ದಿನಸಿ ಅಂಗಡಿಯೊಂದರಿಂದ 4 ಲಕ್ಷ ರೂ. ಹಣ ಕಳವುಗೈದ ಘಟನೆ ಕಳಾರ ಎಂಬಲ್ಲಿ ನಡೆದಿದೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕಳಾರ ಮೊಯ್ದೀನ್ ಕುಂಞಿ ಎಂಬವರ ಮಗ ಇಸ್ಮಾಯಿಲ್ ಎಂಬವರ ಅಂಗಡಿಯಿಂದ ಹಣ ಕಳವು ಮಾಡಲಾಗಿದೆ.
ಇಸ್ಮಾಯಿಲ್ ರವರು ಕಡಬ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಬದಿಯಲ್ಲಿ ದಿನಸಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಫೆ.29 ರ ರಾತ್ರಿ ಹಣ ಕಳವು ಮಾಡಲಾಗಿದೆ. ಘಟನೆ ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.