ವಿಟ್ಲ: ಕನ್ಯಾನದಲ್ಲಿ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು.

ಪ್ರಕರಣದ ತನಿಖೆಯನ್ನು ಪೋಲಿಸ್ ಇಲಾಖೆ ನಡೆಸುತ್ತಿದ್ದು, ತಪ್ಪಿತಸ್ಥನಿಗೆ ಕಾನೂನಿನಡಿಯಲ್ಲೇ ಶಿಕ್ಷೆಯಾಗಲಿದೆ ಎಂದರು.
ಮೃತ ಬಾಲಕಿಯ ಪೋಷಕರಿಗೆ ಬಂಟ್ವಾಳ ಬಿಜೆಪಿ ಕ್ಷೇಮನಿಧಿಯಿಂದ ನೂತನ ಮನೆ ನಿರ್ಮಿಸುವುದಾಗಿ ಸ್ಥಳದಲ್ಲಿಯೇ ಶಾಸಕರು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಮಂಡಲದ ಪದಾಧಿಕಾರಿಗಳು,ಸಂಘ ಪರಿವಾರದ ಪ್ರಮುಖರು ಉಪಸ್ಥಿತರಿದ್ದರು.
