ಕಡಬ: ಕೃಷಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವರ ಪಿತ್ರಾರ್ಜಿತ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ಅನ್ಯಧರ್ಮಿಯರು ಪಾಳುಬಿದ್ದ ಕಟ್ಟಡದಲ್ಲಿ ಧಾರ್ಮಿಕ ವಿಧಿವಿಧಾನ ನಡೆಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ಗ್ರಾಮ ಪಂಚಾಯತ್ ಗೆ ದೂರು ನೀಡಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನ ಮಾಡಿದ್ದಾರೆಂದು ಆರೋಪಿಸಿ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಡಬ ರೆಂಜಲಾಡಿ, ಎನ್ಕಾಜೆ ನಿವಾಸಿ ಶೋಭರಾಜ್ ಎಂಬವರು ಜೋಸ್ ವರ್ಗಿಸ್, ಟಿ. ಜಿ. ಚಾಕೋ, ವಿಕ್ಟರ್ ಮಾರ್ಟಿಸ್, ಹಾರಿಸ್ ಕಳಾರ ಎಂಬವರ ವಿರುದ್ಧ ದೂರು ನೀಡಿದ್ದಾರೆ.
ಕೃಷಿ ಕೆಲಸ ನಿರ್ವಹಿಸುತ್ತಿರುವ ಪಿತ್ರಾರ್ಜಿತ ಜಾಗದಲ್ಲಿ ಪಾಳು ಬಿದ್ದಿರುವ ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿದ ಅನ್ಯಧರ್ಮಿಯರು ಅವರ ಧಾರ್ಮಿಕ ವಿಧಿವಿಧಾನ ಮಾಡಲು ತಯಾರಿ ನಡೆಸುತ್ತಿದ್ದು, ಈ ಬಗ್ಗೆ ತಹಶೀಲ್ದಾರ್, ಪಿಡಿಒ ಮತ್ತು ಗ್ರಾಮ ಪಂಚಾಯತ್ ನವರಿಗೆ ಅರ್ಜಿ ನೀಡಿದ್ದು, ಮೇ.6 ರಂದು ಜೋಸ್ ವರ್ಗಿಸ್, ಟಿ. ಜಿ. ಚಾಕೋ, ವಿಕ್ಟರ್ ಮಾರ್ಟಿಸ್, ಹಾರಿಸ್ ಕಳಾರ ಎಂಬವರು ಶೋಭರಾಜ್ ರವರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ನೀನು ಕೊಟ್ಟಿರುವ ದೂರು ಅರ್ಜಿಯನ್ನು ವಾಪಸ್ಸು ಪಡೆದುಕೊ ಇಲ್ಲದಿದ್ದರೆ ನಿನ್ನ ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಹೇಳಿ ಹಲ್ಲೆಗೆ ಯತ್ನಿಸಿದ್ದು, ಅಷ್ಟೇ ಅಲ್ಲದೇ ಗೇರು ಬೀಜದ ಮರವನ್ನು ಕಡಿದು ಹಾನಿ ಉಂಟು ಮಾಡಿದ್ದರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ ಕ್ರ ನಂಬ್ರ: 44/2022 ಕಲಂ : 448, 427, 504, 506 R/W 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.