ಕೊಪ್ಪಳ: ಅದೊಂದು ಸುಂದರ ಕುಟುಂಬ. ಮೂರು ಮಕ್ಕಳು, ಗಂಡ ಹೆಂಡತಿ ಖುಷಿ ಖುಷಿ ಇಂದ ಜೀವನ ಮಾಡ್ತಿದ್ರು. ಬಾಡಿಗೆ ಮನೆಯಾದ್ರೂ, ಆ ಮನೆಯಲ್ಲಿ ಸಂತೋಷಕ್ಕೇನು ಕಡಿಮೆ ಇರಲಿಲ್ಲ. ಆದ್ರೆ ಆ ಇಡೀ ಮನೆಯ ಸಂತೋಷ ಇಂದು ನುಚ್ಚು ನೂರಾಗಿದೆ. ವಿದ್ಯುತ್ ಶಾಕ್ ನಿಂದ ತಾಯಿ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ.

ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತಾಯಿ ಹಾಗೂ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. 28 ವರ್ಷದ ಶೈಲಾ, 2 ವರ್ಷದ ಪವನ್, 3 ವರ್ಷದ ಸಾನ್ವಿ ಮೃತ ದುರ್ದೈವಿಗಳಾಗಿದ್ದಾರೆ.
ತಾಯಿ ಶೈಲಾ ಮನೆಯಲ್ಲಿ ಮಕ್ಕಳನ್ನ ಬಿಟ್ಟು ಬಟ್ಟೆ ತೊಳೆಯೋಕೆ ಹೋಗಿದ್ರು, ಇತ್ತ ತಂದೆ ಉಮೇಶ್ ಸಂತೆಗೆ ಹೋಗಿದ್ರು. 2 ವರ್ಷದ ಪವನ್ ಮನೆಯಲ್ಲಿ ಇದ್ದ ಈ ಸಂದರ್ಭದಲ್ಲಿ ಬಟ್ಟೆ ಒಣಗಾಕಲು ಹಾಕಿದ ತಂತಿ ಹಿಡಿದಿದ್ದಾನೆ. ಪರಿಣಾಮ ಪವನ್ ಒದ್ದಾಡೋದನ್ನ ಅಕ್ಕ ಸಾನ್ವಿ ಕಂಡು ಬಿಡಸಲು ಹೋಗಿದ್ದಾಳೆ ಈ ಸಂದರ್ಭದಲ್ಲಿ ಮಕ್ಕಳನ್ನ ಉಳಿಸೋಕೆ ಹೋಗಿ ತಾಯಿ ಕೂಡಾ ಪ್ರಾಣ ಬಿಟ್ಟಿದ್ದಾಳೆ. ಒಂದೇ ಮನೆಯಲ್ಲಿ ಮೂರು ಜೀವಗಳು ಬಲಿಯಾಗಿದ್ದಾರೆ. ಇನ್ನು ಮಕ್ಕಳು, ಹೆಂಡತಿಯನ್ನ ಕಳೆದುಕೊಂಡ ಉಮೇಶ್ ಏಕಾಂಗಿಯಾಗಿದ್ದಾರೆ.
ಇಲ್ಲಿ ಇನ್ನೊಂದು ಆಶ್ಚರ್ಯಕರ ಘಟನೆ ನಡೆದಿದೆ. ಶೈಲಾ ಉಮೇಶ್ ದಂಪತಿಗೆ ಮೂರು ಮಕ್ಕಳು. ಸಾನ್ವಿ, ಪವನ್ ಹಾಗೂ ಸೂರಯ್ಯ, ಉಮೇಶ್ ಸಂತೆಗೆ ಹೋಗಿ ಕುರಿ ಮಾರಾಟ ಮಾಡೋ ಕೆಲಸ ಮಾಡ್ತಾರೆ. ಇಂದು ಕೂಡಾ ಸಂತೆಗೆ ಹೋಗಿದ್ರು. ವಾಪಸ್ ಬರೋ ಅಷ್ಟರಲ್ಲಿ ಮೂರು ಜೀವಗಳು ಬಲಿಯಾಗಿವೆ. ಇಲ್ಲಿ ಒಂದು ವರ್ಷದ ಮಗ ಸೂರಯ್ಯ ಆಶ್ಚರ್ಯಕರ ರೀತಿಯಲ್ಲಿ ಮಗು ಬದುಕುಳಿದ್ದಾನೆ. ತಂತಿ ಹಿಡಿದುಕೊಂಡು ಮೂವರು ಪ್ರಾಣ ಕಳೆದುಕೊಂಡಿದ್ದರು.ಇತ್ತ ಸೂರಯ್ಯ ಕೂಡಾ ಮನೆಯಲ್ಲಿ ಬಿದ್ದಿರೋ ವಾಯರ್ ಹಿಡಿದುಕೊಳ್ಳಲು ಹೊರಟಿದ್ದ, ಶೈಲಾ ಒದ್ದಾಡಿರೋದನ್ನ ನೋಡಿದ ಸ್ಥಳೀಯರು ಮನೆಗೆ ಓಡೋಡಿ ಬಂದು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಗ್ರಾಮದ ನಾಗಪ್ಪ ಅನ್ನೋ ವ್ಯಕ್ತಿ ತನ್ನ ಧೋತಿ ಹಾಕಿ ಸೂರಯ್ಯನನ್ನ ಬದುಕಿಸಿದ್ದಾರೆ. ವಿದ್ಯುತ್ ಶಾಕ್ಗೆ ಮೂವರು ಬಲಿಯಾಗಿದ ಘಟನೆ ತಿಳಿಯುತ್ತಿದ್ದಂತೆ ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳನ್ನ ಕನಕಗಿರಿ ಪ್ರಾಥಮಿಕ ಆರೋಗ್ಯ ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಿದ್ದಾರೆ.