ಪುತ್ತೂರು: ಮೂರುವರೆ ವರ್ಷದ ಮಗುವೊಂದು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಘಟನೆ ಕರಿಯಾಲು ನೆಕ್ಕರೆ ಎಂಬಲ್ಲಿ ನಡೆದಿದೆ.
ಕರಿಯಾಲು ನೆಕ್ಕರೆ ನಿವಾಸಿ ಸಂತೋಷ್ ಮತ್ತು ತನುಜಾ ದಂಪತಿಗಳ ಮೂರುವರೆ ವರ್ಷದ ಗಂಡು ಮಗು ಇಶಾಂತ್ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ ಮಗು.

ಎರಡು ದಿನಗಳಿಂದ ಮಗು ಅನಾರೋಗ್ಯದಿಂದಿದ್ದು, ಚಿಕಿತ್ಸೆಯ ನಂತರ ಸ್ವಲ್ಪ ಚೇತರಿಸಿಕೊಂಡಿದ್ದು, ಆದರೇ ಮೇ.6 ರಂದು ಹಠಾತ್ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು,ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟಿದೆ ಎನ್ನಲಾಗಿದೆ.