ವಿಟ್ಲ: ವ್ಯಕ್ತಿಯೋರ್ವ ಜನನಿಬಿಡ ಸ್ಥಳದಲ್ಲೇ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ
ಪುಣಚ ಗ್ರಾಮದ ಪರಿಯಾಲ್ತಡ್ಕ ಪೇಟೆಯಲ್ಲಿ ನಡೆದಿದೆ.
ಪುಣಚ ಗ್ರಾಮದ ನಾಟೆಕಲ್ಲು ನವಗ್ರಾಮ ನಿವಾಸಿ ಲತಾ ಗಂಭೀರ ಗಾಯಗೊಂಡ ಮಹಿಳೆ.

ಮಹಿಳೆಯನ್ನು ಫ್ರೆಂಡ್ಸ್ ವಿಟ್ಲದ ತುರ್ತುವಾಹನದಲ್ಲಿ ವಿಟ್ಲ ಸಮುದಾಯ ಆಸ್ಪತ್ರೆಗೆ ಕರೆತಂದಿದ್ದು, ಗಂಭೀರ ಸ್ಥಿತಿಯಲ್ಲಿರುವ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮಹಿಳೆಯ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ ವ್ಯಕ್ತಿಯನ್ನು ನಾಟೆಕಲ್ಲು ನವಗ್ರಾಮದ ನಿವಾಸಿ ಸೆಂಟ್ರಿಂಗ್ ಶೇಖರ ಯಾನೆ ಶೇಖರ ಪೂಜಾರಿ(50) ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಹಿಳೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜನರ ಕಣ್ಮುಂದೆಯೇ ಕಡಿದು ಕೊಲೆಗೆ ಯತ್ನಿಸಿದ್ದರೂ ಯಾರೊಬ್ಬರೂ ದುಷ್ಕರ್ಮಿಯನ್ನು ಹಿಡಿಯಲು ಹಿಂದೇಟು ಹಾಕಿರುವುದು ಧಿಗ್ರ್ಭಮೆ ಮೂಡಿಸಿದೆ.