ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷತ್ ಇದರ ಸ್ಥಾಪನಾ ದಿನದ ಪ್ರಯುಕ್ತ ಹಲವು ವರುಷಗಳಿಂದ ಪುತ್ತೂರಿನಲ್ಲಿ ವಿಜೃಂಭಣೆಯಿಂದ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಈ ವರುಷ ನಡೆಯುವ 16ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಹತೋಭಾರ ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ಪ್ರಾರ್ಥಿಸಲಾಯಿತು.16 ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ,ಸಮಿತಿಯ ಸಂಚಾಲಕರಾದ ಕಿರಣ್ ಕುಮಾರ್ ರೈ ಕಬ್ಬಿನಹಿತ್ಲು,ಸಹ ಸಂಚಾಲಕರಾದ ಲಕ್ಷ್ಮಣ್ ಬೈಲಾಡಿ,ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಪಾಲಾರ್ ಮತ್ತು ಸುರೇಶ್ ರೈ ಸಮಿತಿಯ ಕಾರ್ಯದರ್ಶಿ ಸೇಶಪ್ಪ ಬೆಳ್ಳಿಪ್ಪಾಡಿ,ಕೋಶಾಧಿಕಾರಿಯಾಗಿ ಜಿತೇಶ್ ಬಲ್ನಾಡ್,ಸಹ ಕಾರ್ಯದರ್ಶಿಗಳಾದ ಚೇತನ್ ಬೊಳುವಾರು ಮತ್ತು ಹರಿಣಿ ಪುತ್ತೂರಾಯ ಮತ್ತು ಸಹ ಕೋಶಾಧಿಕಾರಿ ಜೀವನ್ ಬಲ್ನಾಡ್ ಇವರ ಜೊತೆ ಆಮಂತ್ರಣ ಪತ್ರಿಕೆಯ ಉದ್ಘಾಟಕರಾಗಿ ಆಗಮಿಸಿದ ವಿನಯಕುಮಾರ್ ಕಡಮಜಲು ಅಧ್ಯಕ್ಷರು ವಾಣಿಯ ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಇವರು ಪುತ್ತೂರು ಮೊಸರು ಕುಡಿಕೆ ಉತ್ಸವದ ಲೋಗೋವನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ,ಪ್ರಮುಖರಾದ ಮುರಳಿಕೃಷ್ಣ ಹಸಂತಡ್ಕ,ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಬಿ.ಎಸ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ,ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಮಾಣಿ,ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಪ್ರವೀಣ್ ಕಲ್ಲೇಗ,ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಕೇಶವ್,ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷರಾದ ದಾಮೋದರ ಪಾಟಾಳಿ,ನಗರ ಉಪಾಧ್ಯಕ್ಷರಾದ ಸಂತೋಷ್,ನಗರ ಸಹ ಕಾರ್ಯದರ್ಶಿ ಜಯಂತ್ ಕರ್ಕುಂಜ,ಸೇವಾ ಪ್ರಮುಖ್ ಹರೀಶ್ ದೊಳ್ಪಾಡಿ,ನಗರ ಸಂಯೋಜಕ್ ಜಯಂತ್ ಕುಂಜೂರುಪಂಜ,ಪುತ್ತೂರು ಗ್ರಾಮಾಂತರ ಪ್ರಖಂಡದ ಅಧ್ಯಕ್ಷರಾದ ಜಯಂತ್ ಶೆಟ್ಟಿ ಕಂಬಳತ್ತಡ್ಡ,ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ಸಹದೇವ ಮುಕ್ರಂಪಾಡಿ,ಪ್ರಮುಖರಾದ ಸಂಜಯ್ ಬನಾರಿ,ಭಾಮಿ ಜಗದೀಶ್ ಶೆಣೈ,ನಾಗೇಶ್ ನೈತಾಡಿ,ಸುರೇಶ್ ಕಾವು,ಗಣೇಶ್ ಬೆಳ್ಳಿಪ್ಪಾಡಿ ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.



























