ಪುತ್ತೂರು: ಕೆಲವು ದಿನಗಳ ಹಿಂದೆ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದ ಭೀಕರ ದ್ವಿಚಕ್ರ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಮ್ಮದ್ ಹಾಶಿರ್ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇದೀಗ ಆತನ ಮೃತದೇಹ ಮನೆಗೆ ಆಗಮಿಸಿದ್ದು, ಸಾವಿರಾರು ಮಂದಿ ಅಂತಿಮ ದರ್ಶನ ಪಡೆದರು.

ಮೃತ ಪಾರ್ಥಿವ ಶರೀರವವನ್ನು ಮಂಗಳೂರಿನ ಯೇನಪೋಯ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುತ್ತಾರ್ ಮದನಿನಗರ ಮಸೀದಿಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಿರ್ವಹಿಸಿ ರಾತ್ರಿ ಸುಮಾರು 10:00 ಗಂಟೆಗೆ ಯುವಕನ ಮನೆ ಸಂಟ್ಯಾರ್’ಗೆ ತಲುಪಿದೆ.