ಕಡಬ : ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ ) ಇದರ ಆಶ್ರಯದಲ್ಲಿ ಜೀವರಕ್ಷಕ “ಪಂಚಶ್ರೀ ಆಂಬುಲೆನ್ಸ್” ನ ಮೊದಲ ವರ್ಷದ ಪಾದರ್ಪಣೆ ಪ್ರಯುಕ್ತ ಸೂರ್ಯ ಹೊನಲು ಬೆಳಕಿನ “ಪಂಚಶ್ರೀ ಟ್ರೋಫಿ 2021” ಕಬಡ್ಡಿ ಪಂದ್ಯಾಟವು ಏ.24 ರಂದು ಪಂಜದಲ್ಲಿ ನಡೆಯಲಿದೆ.
65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವಾಗಿದೆ. ಪಂದ್ಯಾಟಲ್ಲಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಬಹುಮಾನಗಳಿದ್ದು, ವೈಯಕ್ತಿಕವಾಗಿ ಬೆಸ್ಟ್ ಕ್ಯಾಚರ್, ಬೆಸ್ಟ್ ರೈಡರ್, ಬೆಸ್ಟ್ ಆಲ್ ರೌಂಡರ್ ಬಹುಮಾನಗಳಿವೆ.
ಪ್ರಥಮ ಬಹುಮಾನ ರೂ.12,021 ಹಾಗೂ ಪಂಚಶ್ರೀ ಟ್ರೋಫಿ, ದ್ವಿತೀಯ ರೂ. 8,021ಹಾಗೂ ಪಂಚಶ್ರೀ ಟ್ರೋಫಿ, ತೃತೀಯ ರೂ.3021 ಹಾಗೂ ಪಂಚಶ್ರೀ ಟ್ರೋಫಿ,ಚತುರ್ಥ ರೂ.3.021 ಹಾಗೂ ಪಂಚಶ್ರೀ ಟ್ರೋಫಿ ನೀಡಿ ಗೌರವಿಸಲಾಗುವುದು ಎಂದು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.