ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ಬಸ್ ನಿಲ್ದಾಣದ ಬಳಿಯ ಕಟ್ಟಡವೊಂದರಲ್ಲಿ ಯುವತಿಯೋರ್ವರ ಜೊತೆ ಅಸಭ್ಯವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮೇ.9 ರಂದು ನಡೆದಿದೆ.
ಗದಗ ಮೂಲದ ಯುವತಿ ಪುತ್ತೂರಿನಲ್ಲಿ ಚಿಕ್ಕಮ್ಮನ ಜೊತೆ ವಾಸ್ತವ್ಯ ಹೊಂದಿದ್ದು, ಕಟ್ಟಡದ ಶೌಚಾಲಯ ಶುಚಿತ್ವ ಕೆಲಸ ನಿರ್ವಹಿಸುತ್ತಿದ್ದರು.ಮೇ 9ರಂದು ಆಕೆ ಬಸ್ ನಿಲ್ದಾಣದ ಬಳಿಯ ಕಟ್ಟಡವೊಂದರ ಮೇಲಂತಸ್ತಿನಲ್ಲಿ ಶೌಚಾಲಯ ಶುಚಿತ್ವಗೊಳಿಸುವ ಸಂದರ್ಭ ನೌಫಲ್ ಸರಳಿಕಟ್ಟೆ ಎಂಬವ ಆಕೆಯ ಮಾನಭಂಗಕ್ಕೆ ಯತ್ನಿಸಿದ್ದಾನೆಂದು ಆರೋಪ ವ್ಯಕ್ತವಾಗಿದೆ.

ಘಟನೆ ಕುರಿತು ಸಂತ್ರಸ್ತೆ ತನ್ನ ಚಿಕ್ಕಮ್ಮನಿಗೆ ಮಾಹಿತಿ ನೀಡಿದ್ದಲ್ಲದೆ ಸಾರ್ವಜನಿಕರ ಮೂಲಕ ಪೊಲೀಸರಿಗೂ ಮಾಹಿತಿ ನೀಡಿದ್ದರು. ಪುತ್ತೂರು ನಗರ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಕೂರ್ನಡ್ಕ ಸಮೀಪ ಬಂಧಿಸಿದ್ದಾರೆ.
ಆರಂಭದಲ್ಲಿ ಅಪ್ರಾಪ್ತೆಗೆ ಕಿರುಕುಳ ಎಂದು ಸುದ್ದಿ ಹರಡಿತ್ತು. ಪೊಲೀಸರು ಘಟನೆ ನಡೆದ ಕಟ್ಟಡಕ್ಕೆ ಆಗಮಿಸಿ ಅಲ್ಲಿದ್ದ ಸಿಸಿ ಕ್ಯಾಮರ ಪರಿಶೀಲಿಸಿದ್ದಾರೆ. ಈ ವೇಳೆ ಯುವತಿಯೊಬ್ಬಳು ಶೌಚಾಲಯ ಶುಚಿಗೊಳಿಸುವ ಸಂದರ್ಭ ಘಟನೆ ನಡೆದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಬಳಿಕ ನೊಂದ ಯುವತಿಯ ಚಿಕ್ಕಮ್ಮ ನೀಡಿದ ದೂರಿನಂತೆ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿ ನೌಫಲ್ ವಿರುದ್ಧ ಸೆಕ್ಷನ್ 354ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.