ಕಾಸರಗೋಡು: ಶವರ್ಮ ಸೇವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಚೆರ್ವತ್ತೂರಿನ ಕೂಲ್ ಬಾರ್ ಮಾಲಕ ಕುಂಞಮ್ಮದ್ ವಿರುದ್ದ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ.
ಕುಮ್ಮದ್ ವಿದೇಶ ದಲ್ಲಿದ್ದಾರೆ ಎನ್ನಲಾಗಿದ್ದು, ಕೂಲ್ ಬಾರ್ ನ ಪಾಲುದಾರ, ಮೆನೇಜರ್ ಸೇರಿದಂತೆ ಮೂವರನ್ನು ಈಗಾಗಲೇ ಬಂಧಿಸಲಾಗಿದೆ.
ಕೂಲ್ ಬಾರ್ ನಿಂದ ಶವರ್ಮ ಸೇವಿಸಿದ ದೇವಾನಂದ ಎಂಬ ವಿದ್ಯಾರ್ಥಿನಿ ಮೃತ ಪಟ್ಟಿದ್ದು, 56 ಮಂದಿ ಅಸ್ವಸ್ಥಗೊಂಡಿದ್ದರು. ಏಪ್ರಿಲ್ 29 ಮತ್ತು 30 ರಂದು ಶವರ್ಮ ಸೇವಿಸಿದ್ದವರಿಗೆ ಅಸ್ವಸ್ಥತೆ ಕಂಡು ಬಂದಿತ್ತು.