ಕಡಬ: ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಪುರೋಹಿತರಾದ ಕೇಶವ ಕಲ್ಲುರಾಯ ಬಂಬಿಲ ರವರ ಮಾರ್ಗದರ್ಶನದಲ್ಲಿ ಪುಣ್ಚಪ್ಪಾಡಿ ದೇವಸ್ಯ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಜುಮಾದಿ ಬಂಟ ಮತ್ತು ಪರಿವಾರ ದೈವಗಳ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ಹಾಗೂ ದೊಂದಿ ಹೊಂಬೆಳಕಿನಲ್ಲಿ ದೈವಗಳ ನೇಮೋತ್ಸವವು ಮೇ.14-16 ರವರೆಗೆ ನಡೆಯಲಿದೆ.

ಮೇ.14 ರಂದು ಬೆಳಿಗ್ಗೆ ಸವಣೂರು ವಠಾರದಿಂದ ಹಸಿರು ಹೊರಕಾಣಿಕೆ ಮೆರವಣಿಗೆ ಮೂಲಕ ಬಂದು, ಉಗ್ರಾಣ ತುಂಬಿಸುವ ಕಾರ್ಯ ನಡೆದು, ಭಜನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಪೂರ್ಣಕುಂಭ ಸ್ವಾಗತದೊಂದಿಗೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ/ಪುಣ್ಯಹವಾಚನ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆಯಾಗಲಿದೆ.
ಮೇ.15 ರಂದು ಮಹಾಗಣಪತಿ ಹೋಮ, ತುಳಸಿ ಪ್ರತಿಷ್ಠೆ, ದ್ವಾರಪಾಲಕ ಪೂಜೆ, ಬ್ರಹ್ಮಕಲಶ ಪೂಜೆ, ದೇವಸ್ಯ ತರವಾಡು ಗೃಹಪ್ರವೇಶ, ನಂತರ ಧರ್ಮದೈವ ಹಾಗೂ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಮಧ್ಯಾಹ್ನ ತಂಬಿಲ ಸೇವೆ, ಹರಿ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ಸಂಜೆ ಧರ್ಮದೈವ ಮತ್ತು ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
