ಪುಂಜಾಲಕಟ್ಟೆ: ಅಕ್ರಮವಾಗಿ ದನ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದ ಎಸ್.ಐ.ಮೇಲೆ ವಾಹನ ನುಗ್ಗಿಸಿ ಕೊಲ್ಲಲು ಪ್ರಯತ್ನ ಮಾಡಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಮೇ.15 ರ ಮುಂಜಾನೆ ವೇಳೆ ನಡೆದಿದ್ದು, ಘಟನೆಯಿಂದಾಗಿ ಪುಂಜಾಲಕಟ್ಟೆ ಠಾಣಾಧಿಕಾರಿ ಸುತೇಶ್ ಕುಮಾರ್ ರವರಿಗೆ ಭುಜ,ಮತ್ತು ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಈ ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ತೀವ್ರವಾಗಿ ಖಂಡಿಸಿದೆ.
ಅಕ್ರಮ ಗೋವು ಸಾಗಾಟಗಾರರಿಗೆ ಕಾನೂನಿನ ಭಯ ಇಲ್ಲದೆ, ಎಗ್ಗಿಲ್ಲದೆ ಕರವಾಳಿಯಲ್ಲಿ ಗೋವು ಸಾಗಾಟ ದಂಧೆ ನಡೆಯುತಿದ್ದು, ಜನರಲ್ಲಿ ಅತಂಕದ ವಾತಾವರಣ ಸೃಷ್ಟಿ ಮಾಡಿದೆ.ಗೋ ಕಳ್ಳರು ಮನೆಮಾಲೀಕರಿಗೆ ತಳುವಾರು ತೋರಿಸಿ ಗೋ ಕಳ್ಳತನ ಮಾಡುತಿದ್ದು, ಅಡ್ಡ ಬಂದ ಪೋಲಿಸರನ್ನು ಕೊಲೆ ಪ್ರಯತ್ನ ಮಾಡುವ ಮಟ್ಟಕ್ಕೆ ಬೆಳೆದಿದ್ದು ಖಂಡನೀಯ.
ಅಕ್ರಮ ಗೋ ಸಾಗಾಟವನ್ನು ತಡೆದ ಪುಂಜಾಲಕಟ್ಟೆ ಪೊಲೀಸರ ಕಾರ್ಯವೂ ಶ್ಲಾಘನೀಯವಾಗಿದೆ. ಪೊಲೀಸರಿಗೆ ರಾತ್ರಿ ಸಮಯದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ಸರಕಾರ ಮತ್ತು ಮೇಲಾಧಿಕಾರಿಗಳು ಒದಗಿಸಬೇಕು ಮತ್ತು ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ತೆರೆದು ಗೋ ಸಾಗಾಟವನ್ನು ತಡೆಗಟ್ಟಬೇಕು ಎಂದು ಹಿಂದೂ ಜಾಗರಣ ವೇದಿಕೆ ಮನವಿ ಮಾಡಿದೆ.