ವಿಟ್ಲ: ಕೇಪು ಗ್ರಾಮದ ಮೈರ ಎಂಬಲ್ಲಿ ನಡೆದ ಎರಡು ತಂಡಗಳ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ಮೇಲೆ ಪ್ರಕರಣ ದಾಖಲಾಗಿದೆ.
ಕೇಪು ಗ್ರಾಮದ ಕುಂಞಪಾದೆ ನಿವಾಸಿ ಗಿರೀಶ್ (33) ಅವರು ನೀಡಿದ ದೂರಿನಂತೆ ಆರೋಪಿಗಳಾದ ಸಾದೀಕ್, ಜಾಬೀರ್, ಅಶ್ರಫ್, ಜುಬೈರ್ ಹಾಗೂ ಇತರ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೇಪು ನಿವಾಸಿ ಗಿರೀಶ್ ರವರು ಕೆಲಸ ಮುಗಿಸಿ ತನ್ನ ಆಟೋ ರಿಕ್ಷಾದಲ್ಲಿ ಮೈರಾ ಗೆ ಹೋಗುತ್ತಿದ್ದಾಗ ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ಎರಡು ಕಾರುಗಳು ನಿಂತಿದ್ದು, ಗಿರೀಶ್ ಅವರ ಪರಿಚಯದ ರಕ್ಷೀತ್ ಕುಮಾರ್ ಎಂಬವರಿಗೆ ಹಲ್ಲೆ ಮಾಡುತ್ತಿದ್ದು, ಇದನ್ನು ಕಂಡು ಗಿರೀಶ್ ಅವರು ಕರವೀರ ಬಸ್ ನಿಲ್ದಾಣದ ಬಳಿ ಹೋಗಿ ಹಲ್ಲೆ ಮಾಡುತ್ತಿರುವುದನ್ನು ತಡೆಯಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ತಲೆಗೆ ಹೊಡೆದು, ನಂತರ ಅಲ್ಲಿದ್ದ ಜಾಬೀರ್ ಎಂಬಾತನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷೀತ್ ಕುಮಾರ್ ನ ತಲೆಗೆ, ಅಶ್ರಫ್ ಎಂಬಾತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ರಕ್ಷಿತ್ ಕುಮಾರ್ ನ ತಲೆಯ ಹಿಂಬದಿಗೆ ಮತ್ತು ಜುಬೈರ್ ನು ತನ್ನ ಕೈಯಲ್ಲಿದ್ದ ತಲವಾರಿನಿಂದ ರಕ್ಷಿತ್ ಕುಮಾರ್ ನಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಗಿರೀಶ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಗೊಳಗಾದ ರಕ್ಷಿತ್ ಕುಮಾರ್ ನ ತಲೆಯ ಹಿಂಬದಿಗೆ ,ಕಣ್ಣಿನ ಭಾಗಕ್ಕೆ ತೀವ್ರ ತರಹದ ರಕ್ತಗಾಯವಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.