ಪುತ್ತೂರು: ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ, ಸಹಾಯಕ ಪೊಲೀಸ್ ಅಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ ರವರ ಮಾರ್ಗದರ್ಶನದಂತೆ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಗಾನಪಿ ಕುಮಾರ್ ಮತ್ತು ಪುತ್ತೂರು ನಗರ ಠಾಣೆಯ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು, ಸುಳ್ಯ ವೃತ್ತ ನಿರೀಕ್ಷಕರು, ಮಹಿಳಾ ಪೋಲಿಸ್ ಠಾಣೆಯ ನಿರೀಕ್ಷಕರು ಹಾಗೂ ಪುತ್ತೂರು ಉಪವಿಭಾಗದ ಎಲ್ಲಾ ಪೋಲಿಸ್ ಠಾಣೆಯ ಉಪನಿರೀಕ್ಷಕರ ನೇತೃತ್ವದಲ್ಲಿ ಪುತ್ತೂರು ಉಪ ವಿಭಾಗದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ‘ಕ್ರಿಕೆಟ್ ಕ್ರೀಡಾಕೂಟ’ ಮೇ.15 ರಂದು ಪುತ್ತೂರು ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ನಡೆಯಿತು.

ಪಂದ್ಯಾವಳಿಯಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣೆ ಪ್ರಥಮ ಸ್ಥಾನ, ಉಪ್ಪಿನಂಗಡಿ ಪೊಲೀಸ್ ಠಾಣೆ ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಅತ್ಯುತ್ತಮ ಬೌಲರ್ ಆಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಕುಮಾರ್ ಕಾಂಬ್ಳೆ, ಅತ್ಯುತ್ತಮ ಬ್ಯಾಟ್ಸ್ ಮನ್ ಪುತ್ತೂರು ಸಂಚಾರ ಠಾಣೆಯ ಶಿವಕುಮಾರ್,ಆಲ್ ರೌಂಡರ್ ಆಟಗಾರರಾಗಿ ಪುತ್ತೂರು ಸಂಚಾರ ಠಾಣೆಯ ಪ್ರಶಾಂತ್ ರೈ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಈ ಕ್ರೀಡಾಕೂಟದಲ್ಲಿ ನಿರ್ಣಾಯಕರಾಗಿ ಭಾನುಪ್ರಕಾಶ್, ಸಂತೋಷ್, ರವಿ ಆಚಾರ್ಯ ಮತ್ತು ರಜಾಕ್ ರವರು ಭಾಗವಹಿಸಿದರು.