ವಿಟ್ಲ: ಪಡಿಬಾಗಿಲು ಶಾಲೆಯಲ್ಲಿ ಗಣಹೋಮ ಪೂಜಾವಿಧಿಯೊಂದಿಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಕೇಪು ಗ್ರಾಮ ಪಂಚಾಯತ್ ಸದಸ್ಯರಾದ ಜಗಜ್ಜೀವನ್ ರಾಮ್ ಶೆಟ್ಟಿ ರವರು ಉದ್ಘಾಟಿಸಿದರು. ಆರತಿ ಬೆಳಗಿ ಸಿಹಿ ಹಂಚಿ ಲೇಖನಿ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಶಾಲಾ ಮಕ್ಕಳನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕಿ ಪುಷ್ಪಾವತಿ ರವರು ಕಲಿಕಾ ಚೇತರಿಕೆ ಉಪಕ್ರಮ ಮತ್ತು ಮಳೆಬಿಲ್ಲು ಚಟುವಟಿಕೆ ಗಳ ಬಗ್ಗೆ ಪೋಷಕರಿಗೆ ಸಮಗ್ರ ಮಾಹಿತಿ ನೀಡಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ ರವರು ಪೋಷಕರಿಗೆ ಶಾಲಾ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ದಂಬೆಕಾನ, ಕಾರ್ಯದರ್ಶಿ ಜಿನಚಂದ್ರ ಜೈನ್, ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ಪದ್ಮಾವತಿ ಮತ್ತು ಎಸ್ ಡಿ ಎಮ್ ಸಿ ಎಲ್ಲಾ ಸದಸ್ಯರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಎನ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲಾ ವಿದ್ಯಾರ್ಥಿನಿಯರಾದ ಧನ್ವಿತಾ ಕಾರಂತ ,ಧನುಶ್ರೀ , ಧ್ರುವಿತಾ, ರೂಪ ಪ್ರಾರ್ಥನೆ ಹಾಡಿದರು. ಸಹಶಿಕ್ಷಕಿ ಮಲ್ಲಿಕಾ ಕೆ ಎಸ್ ಧನ್ಯವಾದ ಸಮರ್ಪಿಸಿದರು.

