ಪುತ್ತೂರು: ತಾನು ಕಚೇರಿಗೆ ತೆರಳುವ ಸಂದರ್ಭ ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ನನ್ನನ್ನು ಎಳೆದು ಅಪಹರಣ
ಮಾಡಿದ್ದಾರೆ ಎಂದು ನೊಂದ ಯುವತಿ ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು
ತಡವಾಗಿ ವರದಿಯಾಗಿದೆ.
ಬಲ್ನಾಡು ಮೇಗಿನಮನೆ ನಿವಾಸಿ ಶಿವಪ್ರಸಾದ್ ಎಂಬವರ
ಪುತ್ರಿ ಸುಚಿತ್ರಾ (23) ದೂರು ನೀಡಿದ ಯುವತಿ.
ತಾನು ಕಡಬದಲ್ಲಿ ಮಾಧ್ಯಮ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೇ 10ರಂದು ಬೆಳಿಗ್ಗೆ ತನ್ನ ಮನೆಯಿಂದ
ಕಚೇರಿಗೆ ತೆರಳುವ ಸಂದರ್ಭ ಬಲ್ಲಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಬಳಿ 4 ಮಂದಿ ಅಪರಿಚಿತರು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಎಳೆದು ಹಾಕಿಕೊಂಡು ಪರಮೇಶ್ವರಿ
ಹಾಗೂ ರವಿನಾರಾಯಣ ರವರ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ನಾರಾಯಣ ಪ್ರಸಾದ್ ಮತ್ತಿಬ್ಬರು ಗಂಡಸರು ಹೊಡೆದು
ನನ್ನನ್ನು ವಿವಸ್ತ್ರಗೊಳಿಸಲು ಯತ್ನಿಸಿದ್ದಾರೆ.
ನನಗೆ ಪರಮೆಶ್ವರಿ, ರವಿನಾರಾಯಣ, ಆದರ್ಶ, ಅರವಿಂದ ನಾರಾಯಣ ಎಂಬವರು ಯಾವುದೋ ಪಾನೀಯವನ್ನು ಕುಡಿಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕಣ್ಣೂರು ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ.ದುರುದ್ದೇಶದಿಂದ ಅಪಹರಣ ಮಾಡಿದ ಆರೋಪಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣಕಾರರು ಕಣ್ಣೂರಿನಲ್ಲಿ ಹೊಟೇಲ್‌ನಲ್ಲಿ ಚಹಾ ಕುಡಿಯಲೆಂದು ಕಾರು ನಿಲ್ಲಿಸಿದ ವೇಳೆ ಸ್ಥಳೀಯರ ಸಹಾಯದಿಂದ ಸ್ಥಳೀಯ ಪೊಲೀಸ್ ಠಾಣೆಯವರ ಮೂಲಕ ಪಾರಾಗಿರುವುದಾಗಿ
ಯುವತಿ ತಿಳಿಸಿದ್ದಾರೆ. ಕಣ್ಣೂರು ಪೊಲೀಸರು ಆಕೆಯನ್ನು ಸಂಪ್ಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಪೊಲೀಸರು ರಾತ್ರಿ ವೇಳೆ ಪುತ್ತೂರು ಆಶ್ರಮದಲ್ಲಿ ಆಕೆಯನ್ನು ಇರಿಸಿ ಬೆಳಿಗ್ಗೆ ಆಕೆಯ ಮನೆಗೆ ತಲುಪಿಸಿದ್ದಾರೆ ಎಂದು ತಿಳಿದು ಬಂದಿದೆ.