ಪುತ್ತೂರು : ಯುವ ಕಾಂಗ್ರೆಸ್ ಪುತ್ತೂರು ಬ್ಲಾಕ್ ಇದರ ಆಶ್ರಯದಲ್ಲಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ” ರಾಷ್ಟ್ರದ ಸಮಗ್ರ ಅಭಿವೃದ್ಧಿಯ ಐಕ್ಯ ಮಂತ್ರವಾಗಿ ಸೌಹಾರ್ದತೆ” ಪ್ರಬಂಧಕ್ಕೆ ನೀಡಲಾದ ವಿಷಯವಾಗಿದೆ.
ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಸ್ಪರ್ಧಿಗಳಿಗೆ ವಯಸ್ಸಿನ ಮಿತಿ ಇರುವುದಿಲ್ಲ ಹಾಗೂ ಪ್ರಬಂಧ 250 ಪದಗಳಿಗೆ ಮೀರಬಾರದು. ಸ್ಪರ್ಧಿಗಳು ಪ್ರಬಂಧದ ಜೊತೆ ತಮ್ಮ ಫೋಟೊ ಮತ್ತು ವಿಳಾಸವನ್ನು ಕಳುಹಿಸಬೇಕು. ಮಾ.30 ರಂದು ಪ್ರಬಂಧ ಕಳುಹಿಸಲು ಕೊನೆಯ ದಿನಾಂಕವಾಗಿದ್ದು, ಏ.5 ರಂದು ಫಲಿತಾಂಶವನ್ನು ಪ್ರಕಟಿಸಲಾಗುವುದು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪ್ರಬಂಧ ಕಳುಹಿಸಬೇಕಾದ ಇ ಮೇಲ್ : indianyouthcongressputtur@gmail.com
ವಾಟ್ಸಪ್ ನಂ : 9900440338
