ವಿಟ್ಲ: ಹಿಂದೂ ಕಾರ್ಯಕರ್ತರಾದ ರಕ್ಷಿತ್ ಹಾಗೂ ಗಿರೀಶ್ ರವರ ಮೇಲೆ ವಿಟ್ಲ ಸಮೀಪ ಹಲ್ಲೆಯಾಗಿದ್ದು, ಈ ಘಟನೆಯನ್ನು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಉಪಾಧ್ಯಕ್ಷರು ಹಾಗೂ ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ ರವರು ತೀವ್ರವಾಗಿ ಖಂಡಿಸಿದ್ದಾರೆ.
ಕುದ್ದುಪದವಿನಲ್ಲಿ ಹಿಂದೂ ಯುವಕರ ಮೇಲೆ ದಾಳಿ ನಡೆಸಿದವರ ಕುಕೃತ್ಯವನ್ನು ಖಂಡಿಸುತ್ತೇನೆ. ಮತಾಂಧತೆಯನ್ನು ಮೈಗೂಡಿಸಿದವರು ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳುವ ಭರವಸೆಯಿದೆ. ನೆಮ್ಮದಿಯ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಭಯಭೀತಿಗೊಳಿಸುವ ಕಾರಣಕರ್ತರನ್ನು ಬಗ್ಗುಬಡಿಯುವ ಅವಶ್ಯಕತೆಯಿದೆ. ಹಲ್ಲೆಗೈದ ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.