ಪ್ರವೀಣ್ ರಾಜ್ ಅಡ್ಯನಡ್ಕ ರವರ ’49’ ಎಂಬ ಕನ್ನಡ ಕಿರುಚಿತ್ರಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ದ ಸಿನಿಮಾ ಇಂಟರ್‍ನ್ಯಾಷನಲ್ ಶೋರ್ಟ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ.

ಮ್ಯಾಕ್ ಫ್ರೇಮ್ ಇಂಡಿಯನ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ, ಇದಲ್ಲದೆ ಒಟ್ಟು 22 ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ವಿಭಿನ್ನ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಸಿನಿ ಫ್ಯಾರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಎಮೋಷನಲ್ ಶೋರ್ಟ್ ಫಿಲ್ಮ್, ಬಯೋಸ್ಕೋಪ್ ಸಿನಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಡೈರೆಕ್ಟರ್- ಯೂತ್, ಬೆಸ್ಟ್ ಪ್ರೋಮಿಸಿಂಗ್ ಪಿಲ್ಮ್, ಬೆಸ್ಟ್ ಎಡಿಟರ್, ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್, ಬೆಸ್ಟ್ ಕನ್ನಡ ಪಿಲ್ಮ್, ಬೆಸ್ಟ್ ಸೋಸಿಯಲ್ ಆರ್ಟ್, ಮತ್ತು ವಿಂಟೇಜ್ ರೀಲ್ಸ್ ಪಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಆಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಕನ್ನಡ ಪಿಲ್ಮ್, ಬೆಸ್ಟ್ ಕಾನ್ಸೆಪ್ಟ್ ಪಿಲ್ಮ್. ಮತ್ತು ಕಲ್ಟ್ ಸಿನಿಮಾ ಪಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಡೈರೆಕ್ಟರ್, ಬೆಸ್ಟ್ ಆಕ್ಟರ್, ಬೆಸ್ಟ್ ಎಡಿಟರ್, ಬೆಸ್ಟ್ ಥ್ರಿಲ್ಲರ್, ಬೆಸ್ಟ್ ಆರ್ಟ್ ಪಿಲ್ಮ್, ಬೆಸ್ಟ್ ಡ್ರಾಮ. ಮತ್ತು ದ ಇಂಡಿಯನ್ ಒನ್‍ಲೈನ್ ಫಿಲ್ಮಂ ಫೆಸ್ಟಿವಲ್ ನಲ್ಲಿ ಬೆಸ್ಟ್ ಸ್ಟೋರಿ, ಬೆಸ್ಟ್ ಎಕ್ಸಪರಿಮೆಂಟಲ್ ಪಿಲ್ಮ್, ಬೆಸ್ಟ್ ಪ್ರೋಡಕ್ಷನ್, ಮತ್ತು ಶೋರ್ಟ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಸ್ಕ್ರೀನ್‍ಪ್ಲೇ ಅವಾರ್ಡ್ ಅನ್ನು ಈ ಕಿರುಚಿತ್ರ ತನ್ನದಾಗಿಸಿಕೊಂಡಿದೆ.

49.. ಇದು 2051 ರಲ್ಲಿ ನಡೆಯಬಹುದಾದ ಕಾಲ್ಪನಿಕ ಕತೆ. 49 ಎಂಬುವುದು ಕನ್ನಡದ ಒಟ್ಟು ಅಕ್ಷರಮಾಲೆ, ಇದು ಒಬ್ಬ ಯುವಕನ ಕತೆ. ಭಾಷಾ ದಬ್ಬಾಳಿಕೆಯಿಂದ ಬೇಸತ್ತು ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೃಷಿಯಲ್ಲಿ ತೊಡಗಿಸಿಕೊಂಡ. ಹಿಂದಿ ಹೇರಿಕೆಯಿಂದ ಅವನ ಜೀವನದಲ್ಲಿ ನಡದ ಫಟನೆಗಳು, ಅದರಿಂದ ಆತ ಅನುಭವಿಸಿದ ನೋವನ್ನು ಮಾರ್ಮಿಕವಾಗಿ ಹೇಳುವ ಚಿತ್ರವೇ ’49’.
ಪ್ರವೀಣ್ ರಾಜ್ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದವರು. 49 ಸಿನಿಮಾದ ಕತೆ, ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ನಟಿಸಿದ್ದಾರೆ. ಹಾಗೂ ಪ್ರವೀಣ್ ರಾಜ್ ಅವರ ಪ್ರವೀಣ್ ರಾಜ್ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ಇವರು ಹಲವಾರು ಕಿರುಚಿತ್ರ ನಿರ್ದೇಶನ ಮಾಡಿದ್ದಾರೆ.

ಹಾಗೆಯೇ ಮಹಾಬಲಿ ಎಂಬ ಕನ್ನಡ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಚಿತ್ರದುದ್ದಕ್ಕೂ ಕಾಣಿಸಲಿದ್ದಾರೆ. ಮಹಾಬಲಿ ಜೂನ್ ತಿಂಗಳಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.