ಪುತ್ತೂರು: ಡಾ. ಮೂಡಂಬೈಲು ರವಿ ಶೆಟ್ಟಿ, ದೋಣಿಂಜೆಗುತ್ತು ರವರ ಜೀವನ ಚಿತ್ರಣ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ರವರು ಬರೆದಿರುವ ‘ರವಿತೇಜ’ ಕೃತಿಯ ಲೋಕಾರ್ಪಣಾ ಕಾರ್ಯಕ್ರಮ ಮೇ.21 ರಂದು ಪ್ರಶಾಂತ್ ಮಹಲ್ ನಲ್ಲಿ ನಡೆಯಲಿದೆ.
ಮುಂಬಯಿ ವಿಶ್ವ ವಿದ್ಯಾನಿಲಯ, ನೇಸರ ಫೌಂಡೇಶನ್ ಮೂಡಂಬೈಲು, ಐಲೇಸಾ, ದ ವಾಯ್ಸ್ ಆಫ್ ಓಷನ್ ನೇತೃತ್ವದಲ್ಲಿ ಮೂರು ಕೃತಿಗಳಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ರವರು ಬರೆದಿರುವ ‘ರವಿತೇಜ’, ಮಿಥಾಲಿ ಪ್ರಸನ್ನ ರೈ ರವರು ಇಂಗ್ಲಿಷ್ ಅನುವಾದಿಸಿರುವ ‘ರವಿತೇಜ’ ಇಂಗ್ಲಿಷ್ ಅನುವಾದ ಕೃತಿ ಹಾಗೂ ‘101 ಸುಭಾಷಿತ’ ಇಂಗ್ಲಿಷ್ ಅನುವಾದವನ್ನು ಡಾ. ಮೂಡಂಬೈಲು ರವಿ ಶೆಟ್ಟಿ ರವರು ಅನುವಾದಿಸಿದ್ದು, ಕನ್ನಡಕ್ಕೆ ಮಹಾಬಲ ಸೀತಾಳಭಾವಿ ರವರು ಅನುವಾದಿಸಿರುವ ಸಂಸ್ಕೃತ ಸುಭಾಷಿತಗಳ ಇಂಗ್ಲಿಷ್ ಮತ್ತು ಕನ್ನಡ ಅನುವಾದಗಳ ಕೃತಿಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ.
‘ರವಿತೇಜ’ ಕೃತಿಗಳ ಲೋಕಾರ್ಪಣೆಯನ್ನು ಹಿರಿಯ ವಿದ್ವಾಂಸರು, ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ರವರು ಮಾಡಲಿದ್ದಾರೆ. ‘ಸುಭಾಷಿತ’ ಕೃತಿ ಲೋಕಾರ್ಪಣೆಯನ್ನು ಖ್ಯಾತ ಉದ್ಯಮಿ, ಸಂಘಟಕರಾದ ಸರ್ವೋತ್ತಮ ಶೆಟ್ಟಿ ರವರು ನೆರವೇರಿಸಲಿದ್ದಾರೆ.
ಕೃತಿಗಳ ಪರಿಚಯವನ್ನು ಲೇಖಕರು, ಪರಿಸರಾಸಕ್ತರಾದ ನರೇಂದ್ರ ರೈ ದೇರ್ಲ ರವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಮೊಡಂಕಾಪು ದೀಪಿಕಾ ಹೈಸ್ಕೂಲ್ ನ ನಿವೃತ್ತ ಮುಖ್ಯೋಪಾಧ್ಯಾಯರಾದ ಮಹಾಬಲೇಶ್ವರ ಹೆಬ್ಬಾರ್ ರವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಂಬಯಿ ವಿವಿಯ ಕನ್ನಡ ವಿಭಾಗ ಮುಖ್ಯಸ್ಥರು, ನಿವೃತ್ತ ಪ್ರಾಧ್ಯಾಪಕರಾದ ಡಾ. ತಾಳ್ತಜೆ ವಸಂತ ಕುಮಾರ್, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ವಸ್ತುಸಂಗ್ರಹಾಲಯದ ಸಂಚಾಲಕರಾದ ಡಾ. ತುಕಾರಾಮ ಪೂಜಾರಿ, ಕೃತಿಕಾರರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿ ರವರು ಆಗಮಿಸಲಿದ್ದಾರೆ.
ಕವಿಗಳಾದ ಶಾಂತಾರಾಮ ಶೆಟ್ಟಿ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮ ನಿರ್ವಹಣೆಯನ್ನು ಮಿಥಾಲಿ ಪ್ರಸನ್ನ ರೈ ರವರು ನಿರ್ವಹಿಸಲಿದ್ದಾರೆ. ಐಲೇಸಾ ಸಾರಥಿ ಡಾ. ರಮೇಶ್ಚಂದ್ರ ತಂಡದವರಿಂದ ‘ಗಾನ ಸೌರಭ’ ಕಾರ್ಯಕ್ರಮವು ನಡೆಯಲಿದೆ.
